Posts

i'm a cement dealer, so i want to provide good quality cement to indian govt constructions. so how to provide my goods to construction?

  Supplying Cement to Indian Government Construction Projects To establish yourself as a cement supplier for government construction projects in India, you'll need to navigate a structured process. The following steps outline the key requirements and procedures: Registration and Certification Requirements Business Registration : Ensure your cement dealership is properly registered as a legal business entity. GST Registration : Maintain an active GST registration and ensure compliance with tax regulations. Quality Certifications : Obtain Bureau of Indian Standards (BIS) certification for your cement products. The primary standard for cement in India is IS 269:2015 for Ordinary Portland Cement. Environmental Clearances : Verify that your suppliers have the necessary environmental clearances from pollution control boards. Government Procurement Platforms Government e-Marketplace (GeM) : Register your business on GeM (gem.gov.in), which is the primary online procure...

ಗ್ರಂಥ : ಬದುಕಲು ಕಲಿಯಿರಿ part : 47

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು :  ಸ್ವಾಮಿ ಜಗದಾತ್ಮಾನಂದಜಿ  ಭಾಗ :  47   ಡಾ. ಅಂಬೇಡ್ಕ‌ರ್ ವಿದೇಶದಲ್ಲಿ ವಿದ್ಯಾರ್ಥಿಯಾಗಿದ್ದಾಗ ತಮ್ಮ ಅಧ್ಯಯನ ಅಭ್ಯಾಸಗಳಲ್ಲಿ ಮುಳುಗಿಹೋಗಿದ್ದರು. ಜ್ಞಾನ ಪಿಪಾಸುವಿಗೆ ನಿದ್ರೆ ಮತ್ತು ಸುಖ ಇಲ್ಲ ಎಂಬ ಸುಭಾಷಿತ ಅವರ ಪಾಲಿಗೆ ಅಕ್ಷರಶಃ ನಿಜವಾಗಿತ್ತು. ವಿದ್ಯಾಭ್ಯಾಸಕ್ಕೆಂದು  ತಾಯ್ನಾಡಿನಿಂದ  ಬಹುದೂರ ಹೋಗಿ ಕಾಲ ಹರಣ ಮಾಡಿದರೆ, ಭೋಗ ವಿಲಾಸ ವೈಭವಗಳ ಬೆನ್ನಟ್ಟಿದರೆ ದೇಶದ್ರೋಹವಾಗುತ್ತದೆಂದು ಅವರು ಯೋಚಿಸಿದರು. ಹಾಗಾಗಿ ಸಿನೆಮಾ ನೋಡುವ ಚಟವಾಗಲಿ, ಊರುಕೇರಿ ಅಲೆಯುವ ಹವ್ಯಾಸವಾಗಲಿ ಅವರ ಮನಸ್ಸನ್ನೆಂದೂ ಸೆಳೆಯಲಿಲ್ಲ. ಅಂಬೇಡ್ಕರ್ ಮಹಾ ಪುಸ್ತಕಪ್ರೇಮಿಗಳು. ಪುಸ್ತಕಗಳನ್ನು ಕಂಡರೆ ಅವರಿಗೆ ದೇಹಾಯಾಸ ಮಾನಸಿಕ ವ್ಯಥೆಗಳೂ ದೂರವಾಗುತ್ತಿದ್ದವು. ಲಂಡನ್ನಿಗೆ ಅವರು ವಿಶೇಷ ಅಧ್ಯಯನಕ್ಕಾಗಿ ಹೋದಾಗಲಂತೂ, ಪುಸ್ತಕಾಲಯದ ಕಾವಲುಗಾರ ಕಿಟಕಿಬಾಗಿಲುಗಳನ್ನು ಮುಚ್ಚಿ ಬಂದು ಅವರನ್ನು ಎಚ್ಚರಿಸುವ ತನಕವೂ ತಮ್ಮ ಆಸನದಲ್ಲೇ ಕುಳಿತು ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಅಲ್ಪಾಹಾರಿಯಾಗಿದ್ದುಕೊಂಡು ಅವರು ತಮ್ಮ ಸಾಹಸದ ಜ್ಞಾನಯಾತ್ರೆಯನ್ನು ತಡೆಯಿಲ್ಲದೇ ನಡೆಸಿದರು. ಅವರ ಜ್ಞಾನದಾಹ ಅಂತಹದಾಗಿತ್ತು.  'ಮಹತ್ಕಾರ್ಯಗಳು ಹಠಾತ್ ಬಲದಿಂದಲ್ಲ -ನಿರಂತರ ಪರಿಶ್ರಮದಿಂದ ಸಾಧ್ಯವಾಗಿವೆ' ಎಂದು ಡಾ. ಜಾನ್ಸನ್ ಹೇಳಿದ.  'ಹಿಡಿದ ಕೆಲಸವನ್ನು ಪರಿಪೂರ್ಣಗೊಳಿ...

ಅರ್ಹತೆಗೆ ಒಲಿದ ಅದೃಷ್ಟ ಗ್ರಂಥ : ಬದುಕಲು ಕಲಿಯಿರಿ part 46

 ಗ್ರಂಥ : ಬದುಕಲು ಕಲಿಯಿರಿ ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ : 46  ಅರ್ಹತೆಗೆ ಒಲಿದ ಅದೃಷ್ಟ   ಇತ್ತೀಚೆಗೆ ಯುವಕನೊಬ್ಬ ಪ್ರಸಿದ್ದ ಕ್ರೀಡಾಪತ್ರಿಕೆ ಏರ್ಪಡಿಸಿದ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿ ಹತ್ತು ಸಾವಿರ ರೂಪಾಯಿಗಳ ಬಹುಮಾನ ಪಡೆದ. ಎಲ್ಲರೂ ಅವನ ಅದೃಷ್ಟವನ್ನು ಕಂಡು ಚಕಿತರಾದರು. ಸಂತೋಷವನ್ನು ವ್ಯಕ್ತಪಡಿಸಿ ಧನ್ಯವಾದಗಳನ್ನು ಅರ್ಪಿಸಿದರು. ಆತ ನಮ್ಮ ಶಾಲೆಯ ಹಳೆ ವಿದ್ಯಾರ್ಥಿ, ಅಂಥ ಒಂದು ಬಹುಮಾನ ಸಿಕ್ಕೀತೆಂದು ಕನಸಿನಲ್ಲೂ ಯೋಚಿಸಿರಲಿಲ್ಲ' ಎಂದು ಅವನು ನನಗೆ ಹೇಳಿದ. 'ಅದೃಷ್ಟವಲ್ಲದೆ ಮತ್ತೇನು?' ಎಂದವನ ಮಿತ್ರರು ದನಿ ಗೂಡಿಸಿದರು. ಅವನೂ ನಗುತ್ತ ಹೌದೆಂಬಂತೆ ತಲೆತೂಗಿದ. ಆದರೆ ಅದು ಲಾಟರಿಯ ಸ್ಪರ್ಧೆಯಾಗಿರಲಿಲ್ಲ. ಮಿತ್ರರೆಲ್ಲ ದೂರ ಸರಿದ ಮೇಲೆ ಆತನೊಬ್ಬನೇ ಇದ್ದಾಗ ನಾನೊಂದು ಪ್ರಶ್ನೆ ಕೇಳಿದೆ. "ನೀನು ಎಷ್ಟು ವರ್ಷಗಳಿಂದ ಆ ಕ್ರೀಡಾ ಪತ್ರಿಕೆಯನ್ನು ಓದುತ್ತಿದ್ದಿ?' 'ಆರನೇ ತರಗತಿಯಿಂದ' ಎಂದನಾತ. ಈಗ ಅವನು ಪಿ. ಯು. ಸಿ. ಮುಗಿಸಿದ್ದಾನೆ. ಈ ಆರು ವರ್ಷ ಕಾಲ ಪ್ರಕಟವಾದ ಪತ್ರಿಕೆಯ ಪ್ರತಿಯೊಂದು ಸಂಚಿಕೆಯನ್ನೂ ತಪ್ಪದೇ ಓದಿದ್ದ. ಆಟೋಟದ ಸ್ಪರ್ಧೆಗಳಲ್ಲಿ ತತ್ಸಂಬಂಧವಾದ ವಾರ್ತೆಗಳಲ್ಲಿ ಆತನಿಗೆ ಮೊದಲಿನಿಂದಲೂ ಆಸಕ್ತಿ. ಮಕ್ಕಳು ಸಿಹಿ ತಿಂಡಿಗಾಗಿ ಹಾತೊರೆಯುವಂತೆ ಆ ಪತ್ರಿಕೆಗಾಗಿ ಅವನ ಹಂಬಲವಿತ್ತು. ಅದು ಕೈಗೆ ಬಂದೊಡನೆ ಮೊದಲಿನಿಂದ ಕೊನೆಯವರೆಗೆ ಹಲವು ಬಾರಿ ಓದಿದವನು ಆತ. ಈ ಆರು ವ...

ಪ್ರಯತ್ನವೇ ಪರಮ ಪೂಜೆ ಗ್ರಂಥ : ಬದುಕಲು ಕಲಿಯಿರಿ part :45

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ : 45  ಪ್ರಯತ್ನವೇ ಪರಮ ಪೂಜೆ  ನಮ್ಮ ದೇಶದ ಸುಪ್ರಸಿದ್ಧ ತಾತ್ವಿಕ  ಗ್ರಂಥವಾದ 'ಯೋಗವಾಸಿಷ್ಠ'ದಲ್ಲಿ ಸ್ವಪ್ರಯತ್ನವನ್ನು ಕುರಿತು ಹೇಳಿದ ಮಾತುಗಳನ್ನು ಕೇಳಿದ್ದೀರಾ?  'ಸರಿಯಾದ ಮತ್ತು ಉತ್ಸಾಹಪೂರಿತ ಪ್ರಯತ್ನದಿಂದ ಪಡೆಯಲು ಸಾಧ್ಯವಾಗದ ವಸ್ತು ಯಾವುದೂ ಈ ಪ್ರಪಂಚದಲ್ಲಿಲ್ಲ. ಯಾರಾದರೂ ಯಾವುದೇ ವಸ್ತುವನ್ನು ಪಡೆಯಲು ಆಶಿಸಿ, ಅದನ್ನು ಹೊಂದಲು ಯತ್ನಿಸಿದುದೇ ಆದರೆ ಅವರು ಖಂಡಿತವಾಗಿಯೂ ಸಫಲರಾಗಬಲ್ಲರು. ಆದರೆ ಹಿಡಿದ ದಾರಿಯಲ್ಲಿ ಹಿಂದೇಟು ಹಾಕದೆ ಮುಂದುವರಿಯುತ್ತಲೇ ಸಾಗಬೇಕು. 'ಈ ಪ್ರಪಂಚದಲ್ಲಿ ಹಲವು ಮಂದಿ ಅತ್ಯಂತ ನಿಮ್ನ ಪರಿಸ್ಥಿತಿಗಳಿಂದ, ದುಃಖ ದಾರಿದ್ರಗಳಿಂದ ಪಾರಾಗಿ ಪರಮಭಾಗ್ಯಶಾಲಿಗಳಾದರು. ಬುದ್ಧಿಶಾಲಿಗಳಾದವರು ಪ್ರಯತ್ನ ಮಾತ್ರದಿಂದಲೆ ಅತ್ಯಂತ ಅಪಾಯಕರ ಸನ್ನಿವೇಶಗಳನ್ನು ದಾಟಿ ಜಯಶಾಲಿಗಳಾದರಲ್ಲದೆ ಅದೃಷ್ಟದಲ್ಲಿ ಅರ್ಥಹೀನ ನಂಬಿಕೆಯನ್ನಿಟ್ಟಿಲ್ಲ. ಯಾರು ಯಾವುದಕ್ಕಾಗಿ ಹಾತೊರೆದಿದ್ದನೋ, ಯಾವುದನ್ನು ಪಡೆಯುವುದಕ್ಕಾಗಿ ಹೋರಾಡಿದ್ದನೋ ಅದನ್ನು ಪಡೆದೇ ಪಡೆಯುತ್ತಾನೆ- ಸೋಮಾರಿಯಾಗಿ ಕುಳಿತು ಯಾರು ಏನನ್ನೂ ಸಾಧಿಸಿಲ್ಲ. ಪ್ರತಿಯೊಬ್ಬನೂ ತನಗೆ ತಾನೇ ಶತ್ರು ಅಥವಾ ತನಗೆ ತಾನೇ ಮಿತ್ರ ಎಂಬುದನ್ನು ತಿಳಿಯಬೇಕು. ಯಾರು ತನ್ನನ್ನು ತಾನು ರಕ್ಷಿಸಿಕೊಳ್ಳಲಾರನೋ ಅವನನ್ನು ರಕ್ಷಿಸಲು ಯಾರೂ ಇರಲಾರರು. ಖಂಡಿತವಾಗಿಯೂ ಒಬ್ಬನು ತನ್ನ ಸ...

ಆತ್ಮ ವಿಮರ್ಶೆಯ ಅಭ್ಯಾಸ - ಗ್ರಂಥ: ಬದುಕಲು ಕಲಿಯಿರಿ. part 44;

 ಗ್ರಂಥ: ಬದುಕಲು ಕಲಿಯಿರಿ. ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ 44; ಆತ್ಮ ವಿಮರ್ಶೆಯ ಅಭ್ಯಾಸ   ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಹಂಬಲ ನಮಗಿದ್ದರೆ ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗಬೇಕೆಂದಿದ್ದರೆ, ಸಿಂಹಾವಲೋಕನದ ಅಭ್ಯಾಸವನ್ನು ರೂಢಿಸಿಕೊಳ್ಳಬೇಕೆಂಬುದು ಅನುಭವಿಗಳ ಆದೇಶ, ಅರಣ್ಯದಲ್ಲಿ ಸಂಚರಿಸುವ ಸಿಂಹ ಒಮ್ಮೊಮ್ಮೆ ತನ್ನ ಮುಖ ತಿರುಗಿಸಿ ನಡೆದು ಬಂದ ದಾರಿಯನ್ನು ಅವಲೋಕಿಸುತ್ತದೆ ಎನ್ನುತ್ತಾರೆ. ಇದನ್ನು ಸಿಂಹಾವಲೋಕನ ಎನ್ನುತ್ತಾರಷ್ಟೆ. ದಿನದ ಚಟುವಟಿಕೆಗಳನ್ನೂ ಸಿಂಹಾವಲೋಕನ ಕ್ರಮದಿಂದ ಪರಿಶೀಲಿಸಬೇಕು. 'ಮನವ ಶೋಧಿಸಬೇಕು ನಿಚ್ಚ, ಅನುದಿನ ಮಾಡುವ ಪಾಪಪುಣ್ಯದ ವೆಚ್ಚ' ಎನ್ನುವ ದಾಸವಾಣಿಯಲ್ಲೂ ಆ ಅಭ್ಯಾಸದ ಆವಶ್ಯಕತೆ ಸೂಚಿತವಾಗಿದೆ. ದಿನದ ಕೊನೆಯ ಭಾಗದಲ್ಲಿ ನಿದ್ರಿಸುವ ಮೊದಲು 'ನನ್ನ ಪಾಲಿಗೆ ಬಂದ ಆಯುಸ್ಸಿನಲ್ಲಿ ಈ ಒಂದು‌ ದಿನವನ್ನು ಹೇಗೆ ಕಳೆದೆ? ನನಗೆ ಸಿಕ್ಕಿದ ಅವಕಾಶಗಳನ್ನು ಹೇಗೆ  ಉಪಯೋಗಿಸಿಕೊಂಡೆ? ಎಲ್ಲಿ ತಪ್ಪುಗಳಾದವು? ಕಾರಣಗಳೇನು ? ನಾಳಿನ ಅಂಥ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳಬಹುದು? ಈ ಹೊತ್ತು ಮಾಡಬೇಕಾಗಿದ್ದ ಕೆಲಸಗಳನ್ನು ಹೊರಗಿನ ಒತ್ತಾಯ ಒತ್ತಡಗಳಿಂದ ಗೊಣಗುತ್ತ ಮಾಡಿದೆನೆ? ಸ್ವಂತ ಯೋಚನೆ ಯೋಜನೆಗಳನ್ನನುಸರಿಸುತ್ತ ಉತ್ಸಾಹದಿಂದ ಮಾಡಿದೆನೆ? ಇನ್ನೂ ಚೆನ್ನಾಗಿ ಮಾಡಬಹುದಿತ್ತೇ? ಸ್ನೇಹಿತರೊಡನೆ ಬಂಧುಬಾಂಧವರೊಡನೆ ಮತ್ತು ನೆರೆಹೊರೆಯವರೊಂದಿಗೆ ಹೇಗೆ ವರ್ತಿಸಿದೆ?'- ಇವೇ ಮೊದಲಾದ ...

ಅಭ್ಯಾಸದ ಹಿನ್ನೆಲೆ ಗ್ರಂಥ: ಬದುಕಲು ಕಲಿಯಿರಿ part : 43

 ಗ್ರಂಥ: ಬದುಕಲು ಕಲಿಯಿರಿ  ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ : 43   ಅಭ್ಯಾಸದ ಹಿನ್ನೆಲೆ   ಒಂದು ಹೊಸ ಅಭ್ಯಾಸವನ್ನು ಕಲಿತು ರೂಢಿಸಿ ದೃಢಪಡಿಸಿಕೊಂಡು ಅದನ್ನು ಮನಸ್ಸಿನಲ್ಲಿ ನೆಲೆ ನಿಲ್ಲುವಂತೆ ಮಾಡಲು ಅತ್ಯಂತ ದೃಢಸಂಕಲ್ಪದಿಂದ ಪ್ರಾರಂಭಿಸಬೇಕು. ಚಂಚಲತೆ, ಅನಿಶ್ಚಿತತೆ ಇವು ಯಾವ ಶಿಸ್ತಿಗೂ ಒಳಪಡದ ದುರ್ಬಲ ಮನಸ್ಸಿನ ಸ್ಥಿತಿ. ಈ ತೆರನಾದ ಮನಸ್ಸಿನ ಶಕ್ತಿ ಏಕಕಾಲದಲ್ಲಿ ಹಲವು ಕಡೆ ಹರಿದು ವ್ಯರ್ಥವಾಗಿ ವ್ಯಯವಾಗುತ್ತದೆ. ಇಂಥ ವ್ಯಕ್ತಿಗಳಿಂದ ಯಾವ ಉತ್ತಮ ಕಾರ್ಯವೂ ಸಾಧ್ಯವಾಗದು. ಸಣ್ಣ ಕೆಲಸವನ್ನಾದರೂ ನಿಯಮ ಪೂರ್ವಕವಾಗಿ ಮನಗೊಟ್ಟು ಮಾಡುವುದರಿಂದ ಕೆಲಸ ಮಾಡುವ ಶಕ್ತಿ ಸಂಚಯವಾಗುವುದು.   ಪರಿಣತ ಸೈಕಲ್ ಸವಾರನನ್ನು ಪರಿಶೀಲಿಸಿ. ಸೈಕಲ್ ಸವಾರಿ ಮಾಡುತ್ತಿರುವಾಗಲೇ ಸ್ನೇಹಿತನ ಹತ್ತಿರ ಮಾತನಾಡುತ್ತ ಸುತ್ತಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತ, ರಸ್ತೆಯಲ್ಲಿ ಎದುರುಗಡೆ ಬರುತ್ತಿರುವ ವಾಹನ ಮತ್ತು ಜನರ ಮಧ್ಯೆ, ಭಯ ಉದ್ವೇಗ ಗೊಂದಲಗಳಿಲ್ಲದೆ ದಾರಿ ಮಾಡಿಕೊಂಡು ಮುನ್ನುಗ್ಗುತ್ತಾನೆ. ಎಲ್ಲಿ ಬ್ರೇಕ್ ಹಾಕಬೇಕೋ ಅಲ್ಲಿ ತಾನೇ ತಾನಾಗಿ, ಎಂದರೆ ಗಮನವಿತ್ತು ಯೋಚಿಸದೇ ಸರಿಯಾಗಿ ಬ್ರೇಕ್ ಹಾಕಿಬಿಡುತ್ತಾನೆ. ಒಂದು ಅಭ್ಯಾಸದಿಂದ ಬಹಳಷ್ಟು ಶಕ್ತಿ ಉಳಿತಾಯವಾಗುತ್ತದೆ. ರೂಢಮೂಲವಾದ ಆ ಒಂದು ಅಭ್ಯಾಸದೊಂದಿಗೆ ಇನ್ನೊಂದು ಪುಟ್ಟ ರಚನಾತ್ಮಕ ಅಭ್ಯಾಸವನ್ನು ಪ್ರಾರಂಭಿಸಬಹುದು. ನಿತ್ಯವೂ ಸ್ನಾ...

ಅಸಾಧ್ಯವೂ ಸಾಧ್ಯ ಗ್ರಂಥ : ಬದುಕಲು ಕಲಿಯಿರಿ part : 42

 ಗ್ರಂಥ : ಬದುಕಲು ಕಲಿಯಿರಿ  ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ :  42   ಅಸಾಧ್ಯವೂ ಸಾಧ್ಯ  ಸುಮಾರು ಐವತ್ತು ವರ್ಷಗಳ ಹಿಂದೆ ಆಂಗ್ಲ ಮಾಸಪತ್ರಿಕೆಯೊಂದರಲ್ಲಿ ಜಪಾನ್ ಪ್ರವಾಸದಿಂದ ಹಿಂದಿರುಗಿದ ಭಾರತೀಯರೊಬ್ಬರು 'ಜಪಾನ್ ಮಹಾರಾಷ್ಟ್ರವಾಗಲು ಕಾರಣವೇನು?' ಎಂಬ ಲೇಖನವನ್ನು ಪ್ರಕಟಿಸಿದರು. ಅವರ ಹಲವು ಅನುಭವಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ಓದುಗರ ಅವಗಾಹನೆಗೆ ತರುತ್ತಲಿದ್ದೇನೆ. ಅರ್ಧಶತಮಾನದ ಹಿಂದೆಯೇ ಒಂದು ಜನಾಂಗ ಸಾಮಾಜಿಕವಾಗಿ ಶಿಸ್ತು, ಶಾಂತಿ ಸಹಕಾರ ಭಾವನೆಯನ್ನು ಕಾರ್ಯರೂಪಕ್ಕೆ ತಂದ ಒಂದು ಘಟನೆ ಅದು:  'ಜಪಾನಿನ ಒಂದು ಹಳ್ಳಿಯಲ್ಲಿ ಎರಡು ದಿನ ತಂಗಿದ್ದೆ. ಅಲ್ಲೊಂದು ಬಿಸಿ ನೀರಿನ ಊಟೆ (ಬುಗ್ಗೆ) ಇತ್ತು. ಅಲ್ಲಿಗೆ ಒಂದು ಜಪಾನೀ ಪ್ರವಾಸಿಗಳ ಗುಂಪು ಬಂದಿತ್ತು. ಸುಮಾರು ಐನೂರು ಮಂದಿ ವಯಸ್ಕರೂ, ನೂರೈವತ್ತು ಮಂದಿ ಮಕ್ಕಳೂ ಆ ತಂಡದಲ್ಲಿದ್ದರು. ಅಷ್ಟು ಮಂದಿ ಅಲ್ಲಿ ಸೇರಿದ್ದಾರೆಂಬುದನ್ನು ಪ್ರತ್ಯಕ್ಷ ನೋಡದಿದ್ದರೆ ಊಹಿಸುವಂತೆಯೂ ಇರಲಿಲ್ಲ. ಎಲ್ಲರೂ ಅಷ್ಟೊಂದು ಮೌನವಾಗಿದ್ದುಕೊಂಡು ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿರುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರು! ಅಲ್ಲಿ ಒಂದು ಸಭಾಂಗಣದಲ್ಲಿ ಸಹಸ್ರಾರು ಮಂದಿ ಕಿಕ್ಕಿರಿದು ತುಂಬಿದ್ದರೂ ಪೂರ್ಣ ಮೌನ ನೆಲಸಿರುತ್ತದೆ!' ನಡತೆಯಲ್ಲಿ ನಯ ಗಾಂಭೀರ್ಯ, ದುಡಿಮೆಯಲ್ಲಿ ಆಸಕ್ತಿ ಮತ್ತು ಏಕಾಗ್ರತೆ, ಪ್ರಾಮಾಣಿಕತೆ, ಸರಳ ಜೀವನವೇ ಮೊದಲಾದ ಗುಣಗ...