Posts

ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣದಲ್ಲೊಂದು ರೌಂಡಪ್

Image
 *ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣದಲ್ಲೊಂದು ರೌಂಡಪ್‌* 🔹🔹🔹🔹🔹🔹🔹🔹🔹🔹🔹 November 4, 2020 ಜಗತ್ತಿನ ಯಾವುದೇ ಭಾಗದಲ್ಲಿ ಜಾತಿ-ಧರ್ಮ- ಭಾಷೆ ಬದಲಾದಂತೆ ಜನರ ವರ್ತನೆಗಳು, ಆಚಾರ ವಿಚಾರಗಳು ಬದಲಾಗಬಹುದು. ಆದರೆ ವಿಶ್ವಾದ್ಯಂತ ಮನುಷ್ಯರ ಮೂಲಭೂತ ವರ್ತನೆಯಲ್ಲಿ ಬದಲಾವಣೆ ಇಲ್ಲದ ಒಂದೇ ಒಂದು ಕ್ಷೇತ್ರವೆಂದರೆ ಅದು ರಾಜಕೀಯ. ಭಾರತದ ರಾಜಕಾರಣಿಗಳು ಮತದಾರರ ಓಲೈಕೆ ಮಾಡುವುದು, ಮುಜುಗರದ ಪ್ರಸಂಗಗಳು ಬಂದಾಗ ಯಾವುದೋ ನೆಪದಲ್ಲಿ ಜನರಿಗೆ ಸಿಗದೆ ಭೂಗತರಾಗುವುದು, ಅಧಿಕಾರದ ದುರುಪಯೋಗದಿಂದ ಆಸ್ತಿ ಗಳಿಸುವುದು ಇದೆಲ್ಲವೂ ಭಾರತಕ್ಕೆ ಸೀಮಿತವಾಗಿಲ್ಲ, ಎಲ್ಲಾ ದೇಶಗಳಲ್ಲೂ ಇದೆ. ನಾವೆಲ್ಲ ಸ್ವರ್ಗ ಸದೃಶ ಎಂದು ಭಾವಿಸುವ ಮಾತ್ರವಲ್ಲ ಅಮೆರಿಕದಲ್ಲೂ ಇದೆ. ಒಂದೇ ವ್ಯತ್ಯಾಸವೆಂದರೆ ನಮ್ಮಲ್ಲಿ ಹಣ ಮಾಡಲು ಅಡ್ಡದಾರಿ ಹಿಡಿದರೆ, ಅವರು ಉದ್ದಿಮೆ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ‌. ನೇರವಾಗಿ ಲಂಚ ರುಷುವತ್ತು ಇಲ್ಲ, ಅಷ್ಟರಮಟ್ಟಿಗೆ ಪ್ರಾಮಾಣಿಕರು. ಇದು ಪರೋಕ್ಷವಾಗಿ ಭ್ರಷ್ಟಾಚಾರದ ವ್ಯಾಪ್ತಿಗೆ ಬರುತ್ತದೆ. ಏಕೆಂದರೆ, ವಿಶ್ವದ ಪ್ರಭಾವಿ ರಾಷ್ಟ್ರದ ನಾಯಕನ ಒಡೆತನದ ಉದ್ದಿಮೆಗಳಿಗೆ ಯಾವುದೇ ರಾಷ್ಟ್ರವಾದರೂ ಕೆಂಪು ಹಾಸಿನ ಸ್ವಾಗತದ ಜೊತೆಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ, ಓಲೈಸುವ ಪ್ರಯತ್ನ ಮಾಡುವುದು ಸಹಜವೇ ತಾನೇ? ಹಾಗೆ ಸಿಗುವ ಲಾಭ ಸಂಪೂರ್ಣವಾಗಿ ಪ್ರಾಮಾಣಿಕ ಸಂಪಾದನೆ ಎನಿಸುವುದೇ? ಇನ್ನು ಅಮೇರಿಕದ ಚುನಾವಣಾ ಪ್ರಕ್ರಿಯೆಯ

ಹಿಂದುಗಳ ಪವಿತ್ರ 12 ಜ್ಯೋತಿರ್ಲಿಂಗಗಳ ನಡುವಿನ‌ ಈ ರಹಸ್ಯ ಕಂಡು ವಿಜ್ಞಾನಿಗಳೇ ಬೆಚ್ಚಿಬಿದ್ದಾದ್ದಾರೆ!!! ಏನು ಆ ವಿಸ್ಮಯ ಗೊತ್ತೆ?

Image
 🤭🤭🤭 ಹಿಂದುಗಳ ಪವಿತ್ರ 12 ಜ್ಯೋತಿರ್ಲಿಂಗಗಳ ನಡುವಿನ‌ ಈ ರಹಸ್ಯ ಕಂಡು ವಿಜ್ಞಾನಿಗಳೇ ಬೆಚ್ಚಿಬಿದ್ದಾದ್ದಾರೆ!!! ಏನು ಆ ವಿಸ್ಮಯ ಗೊತ್ತೆ? ನಮ್ಮ ಭಾರತದ ನೈಜ ಇತಿಹಾಸ, ಸನಾತನ ಹಿಂದೂಗಳ ಚಾಣಾಕ್ಷ ಬುದ್ಧಿಮತ್ತೆ, ಸಾಧನೆ ಹಾಗು ಅವರಿಗಿದ್ದ ಆಗಿನ ಕಾಲದ ವೈಜ್ಞಾನಿಕ ಮನೋಭಾವನೆಯನ್ನ ನಾವು ಈಗಲೂ ಅರಿತುಕೊಳ್ಳುವುದರಲ್ಲಿ ವಿಫಲರಾಗಿದ್ದೇವೆ. ಮೆಕಾಲೆ ಇಂಜೆಕ್ಟ್ ಮಾಡಿ ಹೋದ ಕಾನ್ವೆಂಟ್ ಎಂಬ ಭೂತಕ್ಕೆ ಬಲಿಯಾಗಿ ಈಗಲೂ ನಮ್ಮತನವನ್ನ, ನಮ್ಮ ಸಂಸ್ಕೃತಿಯನ್ನ ಮರೆತು ವಿದೇಶಿಗರೇ ಶ್ರೇಷ್ಟರು ಭಾರತೀಯರು ಕನಿಷ್ಠರು ಅನ್ನೋ ಭಾವನೆ ನಮ್ಮಲ್ಲಿ ಆಳವಾಗಿ ಬೇರೂರಿಬಿಟ್ಟವು ನಮ್ಮ ಪೂರ್ವಜರು, ಋಷಿಮುನಿಗಳ ಸಾಧನೆಯನ್ನ ನಮ್ಮ ದೇಶದ ತಥಾಕಥಿತ ಬುದ್ಧಿಜೀವಿಗಳು, ಸಂಶೋಧಕರೇ ಅಲ್ಲಗಳೆದು ಇಡೀ ಪ್ರಪಂಚದ ಎದುರು ತಲೆ ತಗ್ಗಿಸುವಂತಹ ಅನೇಕ ವಾದಗಳನ್ನು ಮಂಡಿಸಿ, ಸಂಶೋಧನೆಗಳನ್ನ ಮಾಡಿಯೇ ಈ ಮಾತನ್ನ ಹೇಳ್ತಿದೀವಿ ಅಂತ ಬೇರೆ ಪುಂಗಿ ಊದುತ್ತಾರೆ. ಅದರೆ ಭಾರತದ ಬಗ್ಗೆ ಮಾತು ಬಂದರೆ ವಿಶ್ವದ ಕಣ್ಣು ಈಗ ಭಾರತದ ಮೇಲೆ, ಭಾರತದಲ್ಲಿ ಏನೇ ಬದಲಾವಣೆಯಾದರೂ ಅದನ್ನ ಜಗತ್ತು ಅನುಸರಿಸುತ್ತೆ, ನಮ್ಮ ಪೂರ್ವಜರು ಇಡೀ ವಿಶ್ವ ಪರ್ಯಟನೆ ಮಾಡಿದವರು ಇಡೀ ಪ್ರಪಂಚಕ್ಕೆ ನಾಗರೀಕತೆಯ ಪಾಠ ಹೇಳಿಕೊಟ್ಟವರು ಅನ್ನೋದನ್ನ ನಾವು ಭಾರತದ ನೈಜ ಇತಿಹಾಸ ಹಾಗು ಭಾರತ ದರ್ಶನ ಮಾಡಿದರೆ ಅರ್ಥವಾಗುತ್ತದೆ. ವಿಶ್ವ ನಮ್ಮತ್ತ ತಿರುಗಿ ನೋಡುತ್ತೆ ಅನ್ನೋದಕ್ಕೆ ಕಾರಣವೇ ಇಲ್ಲಿನ ಹಿಂದೂ ಧರ್ಮ, ಸಂಸ್ಕೃತಿ

ಜಾರ್ಜ್ ಫ್ಲಾಯ್ಡ್ ಮತ್ತು ಇಂಡಿಯನ್ ಹಿಪಾಕ್ರಸಿ ವಿವರಣೆ

Image
 ಜಾರ್ಜ್ ಫ್ಲಾಯ್ಡ್ ಮತ್ತು ಇಂಡಿಯನ್ ಹಿಪಾಕ್ರಸಿ  __________________ ಆತ ಅಟ್ಲಿ ಅಂತಲೇ ಪ್ರಸಿದ್ಧ. ಪೂರ್ಣ ಹೆಸರು ಅಟ್ಲಿ ಕುಮಾರ್. ಕಪ್ಪು ಮೈ ಬಣ್ಣದವ. ಹೆಸರಾಂತ ತಮಿಳು ಸಿನೆಮಾ ನಿರ್ದೇಶಕ. ಆತನ ಮೈ ಬಣ್ಣ, ಪ್ರೇಮಿಸಿ ಮದುವೆಯಾದ ಆತನ ಪತ್ನಿ ಕೃಷ್ಣಪ್ರಿಯಾಳಿಗೆ ಎಂದೂ ಸಮಸ್ಯೆಯಾಗಲಿಲ್ಲ. ಆದರೆ ನಮ್ಮ ಕೆಲ ಜನರಿಗೆ ಮಾತ್ರ ಅದು ಬಹಳ ದೊಡ್ಡ ಸಮಸ್ಯೆಯಾಗಿ ಕಾಡಿತು. ಅಟ್ಲೀ ನಿಜವಾಗಲೂ ಕಡು ಕಪ್ಪು. ನಿರ್ದೇಶಕನಾಗುವ ಮೊದಲು ಸಹ ನಿರ್ದೇಶಕನಾಗಿದ್ದಾಗಲೂ ಚಿತ್ರರಂಗದ ಚಿಳ್ಳೆ ಮಿಳ್ಳೆಗಳೆಲ್ಲ ಆತನನ್ನು ಬಣ್ಣದ ಕಾರಣಕ್ಕೆ ಹೀಯಾಳಿಸಿದ್ದುಂಟು. ಹಾಗಂತ ಅಟ್ಲಿಯೇನೂ ಸಾಮಾನ್ಯನಲ್ಲ. ‘ರೋಬೋಟ್’ ದಂತಹ ಸಿನೇಮಾ ನಿರ್ದೇಶಿಸಿದ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗೆ ಸಹ ನಿರ್ದೇಶಕನಾಗಿದ್ದವನು. ಅಟ್ಲೀ ತನ್ನ ಮುಗ್ಧತೆಯಿಂದಲೇ ರಜನೀಕಾಂತ್ ಆಪ್ತವಲಯದಲ್ಲಿರುವವನು. ರಜನಿಕಾಂತ್ ಇಂಥ ಅಟ್ಲಿಯ ಮದುವೆಗೆ ಹಾರೈಸಿ, ಈತನ ಸಿನೀಮಾ ಮುಹೂರ್ತಕ್ಕೂ ಹೋಗಿ ಕ್ಲಾಪ್ ಮಾಡಿದ್ದರು. ಭಾವುಕ ಹಾಗೂ ತೆಳು ನಿರೂಪಣೆಯ ಅಟ್ಲಿ ನಿರ್ದೇಶನದ ಸಿನಿಮಾಗಳ ಬಗ್ಗೆ ನನಗೆ ತಕರಾರಿದೆ. ಅದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಅಟ್ಲಿ ನಿರ್ದೇಶಿಸಿದ ‘ಮೆರ್ಸಲ್’ ಚಿತ್ರದಲ್ಲಿ ಜಿಎಸ್ ಟಿ ಕುರಿತಾದ ಸಂಭಾಷಣೆ ದೆಹಲಿವರೆಗೂ ಸದ್ದು ಮಾಡಿತ್ತು. ದೊಡ್ಡ ವಿವಾದ ಸೃಷ್ಟಿಸಿತ್ತು. ‘ಮೆರ್ಸಲ್’ ಹೊರತುಪಡಿಸಿ ಆತನ ‘ರಾಜ ರಾಣಿ’, ‘ಥೇರಿ’, ‘ಬಿಗಿಲ್’ ಸಿನಿಮಾಗಳೆಲ್ಲ ಯಶಸ್ಸು ಕಂಡಂಥವೇ. ಇದರಲ

ಸೆಪ್ಟೆಂಬರ್ 2020ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ

Image
ಸೂಚನೆ ಈ ವೇಳಾಪಟ್ಟಿ  ಚಿತ್ರ ರೂಪದಲ್ಲಿದ್ದು ಪಿಡಿಎಫ್ ರೂಪದಲ್ಲಿ ಇಲ್ಲ ಆದ್ದರಿಂದ ZOOM ಮಾಡಿಯೇ ನೋಡಬೇಕು  

ಪಿಯುಸಿ ತರಗತಿಯವರಿಗೆ ಟೈಮ್ ಟೇಬಲ್ ಬಿಡುಗಡೆ ಮಾಡಲಾಗಿದೆ

Image
ಆನ್ಲೈನ್ ಕ್ಲಾಸ್ ಅಂದರೆ ಯುಟ್ಯೂಬ್ ಚಾನೆಲ್ ಟೈಮ್ ಟೇಬಲ್ ಅನ್ನು ಬಿಡುಗಡೆ ಮಾಡಲಾಗಿದ್ದು ಈ ಕೆಳಗಿನ ಪಿಡಿಎಫ್ ನಲ್ಲಿ ಕ್ಲಿಕ್ ಮಾಡಿ ನೋಡಿ Click above image to view

ಹೊಸ ಶಿಕ್ಷಣ ನೀತಿ ಜಾರಿ 2020

Image
ಹೊಸ ಶಿಕ್ಷಣ ನೀತಿ ಜಾರಿ ಇನ್ನು ಮುಂದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಭಾರತದಲ್ಲಿ ಜಾರಿಯಾಗಲಿದೆ.  ಈಗ ಇರುವ 10+2 ಶಿಕ್ಷಣ ವ್ಯವಸ್ಥೆ 5+3+3+4 ಮಾದರಿಯಾಗಿ ಬದಲಾವಣೆಯಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ಸಾರ್ವಜನಿಕರಿಂದ ಸಲಹೆಗಳನ್ನು ಪಡೆದು ಈಗ ಈ ಹೊಸ ಎನ್‌ಇಪಿಗೆ ಕೇಂದ್ರ ಕ್ಯಾಬಿನೆಟ್‌ ಒಪ್ಪಿಗೆ ನೀಡಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್ ಸುದ್ದಿಗೋಷ್ಠಿ ನಡೆಸಿ ಹೊಸ ನೀತಿಯ ವಿವರಗಳನ್ನು ನೀಡಿದರು. 2015ರಿಂದ ಎನ್‌ಇಪಿ ಜಾರಿ ಸಂಬಂಧ ಚರ್ಚೆ ನಡೆಯುತ್ತಿತ್ತು. ಈಗ ಹೊಸ ನೀತಿ ಜಾರಿಯಾಗಿದೆ. 34 ವರ್ಷದ ಹಿಂದೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಿತ್ತು. ಆದಾದ ಬಳಿಕ ಈಗ ಬದಲಾವಣೆ ಆಗುತ್ತಿದೆ. ಎನ್‌ಇಪಿಯಲ್ಲಿ ಏನಿದೆ?  ಇನ್ನು ಮುಂದೆ 10+2 ಶಿಕ್ಷಣ ವ್ಯವಸ್ಥೆ ಇರುವುದಿಲ್ಲ. ಇದನ್ನು 5+3+3+4 ರಂತೆ ವಿಂಗಡನೆ ಮಾಡಲಾಗಿದೆ. ಇದರರ್ಥ ಶಾಲೆಯ ಮೊದಲ ಐದು ವರ್ಷಗಳು ಅಡಿಪಾಯ ಹಂತ, 3 ರಿಂದ 5 ನೇ ತರಗತಿಯವರೆಗಿನ ಮೂರು ವರ್ಷಗಳನ್ನು ಪೂರ್ವಸಿದ್ಧತಾ ಹಂತವಾಗಿ ವಿಂಗಡಿಸಲಾಗಿದೆ. ನಂತರ ಮೂರು ವರ್ಷಗಳು ಮಧ್ಯಮ ಹಂತವಾಗಿ ವಿಂಗಡಿಸಲಾಗಿದೆ. ನಂತರದ ನಾಲ್ಕು ವರ್ಷವನ್ನು ದ್ವಿತೀಯ ಹಂತವನ್ನಾಗಿ ವಿಂಗಡಿಸಲಾಗಿದೆ. ಶಾಲೆಗಳು ಶಾಲೆಗಳು ಕಲೆ, ವಾಣಿಜ್ಯ, ವಿಜ್ಞಾನದ ಹೊಳೆಗಳ ಯಾವುದೇ ಕಟ್ಟುನಿಟ್ಟಿನ ರಚನೆಯನ್ನು ಹೊಂದಿರುವುದಿಲ್ಲ, ವಿದ್ಯಾರ್ಥಿಗಳು ತಾವು ಬಯಸ

2nd PUC online classes has started online YouTube channel free completely

Image
Dear friends YouTube channel classes are uploaded  So please visit and watch online classes for completely free Biology class playlist link below👇👇👇👇 Scroll down Screenshots. Below for proof Screenshots 1) Screenshots 2)  click here to go biology classes playlist