ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣದಲ್ಲೊಂದು ರೌಂಡಪ್

 *ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣದಲ್ಲೊಂದು ರೌಂಡಪ್‌*



🔹🔹🔹🔹🔹🔹🔹🔹🔹🔹🔹

November 4, 2020

ಜಗತ್ತಿನ ಯಾವುದೇ ಭಾಗದಲ್ಲಿ ಜಾತಿ-ಧರ್ಮ- ಭಾಷೆ ಬದಲಾದಂತೆ ಜನರ ವರ್ತನೆಗಳು, ಆಚಾರ ವಿಚಾರಗಳು ಬದಲಾಗಬಹುದು. ಆದರೆ ವಿಶ್ವಾದ್ಯಂತ ಮನುಷ್ಯರ ಮೂಲಭೂತ ವರ್ತನೆಯಲ್ಲಿ ಬದಲಾವಣೆ ಇಲ್ಲದ ಒಂದೇ ಒಂದು ಕ್ಷೇತ್ರವೆಂದರೆ ಅದು ರಾಜಕೀಯ. ಭಾರತದ ರಾಜಕಾರಣಿಗಳು ಮತದಾರರ ಓಲೈಕೆ ಮಾಡುವುದು, ಮುಜುಗರದ ಪ್ರಸಂಗಗಳು ಬಂದಾಗ ಯಾವುದೋ ನೆಪದಲ್ಲಿ ಜನರಿಗೆ ಸಿಗದೆ ಭೂಗತರಾಗುವುದು, ಅಧಿಕಾರದ ದುರುಪಯೋಗದಿಂದ ಆಸ್ತಿ ಗಳಿಸುವುದು ಇದೆಲ್ಲವೂ ಭಾರತಕ್ಕೆ ಸೀಮಿತವಾಗಿಲ್ಲ, ಎಲ್ಲಾ ದೇಶಗಳಲ್ಲೂ ಇದೆ. ನಾವೆಲ್ಲ ಸ್ವರ್ಗ ಸದೃಶ ಎಂದು ಭಾವಿಸುವ ಮಾತ್ರವಲ್ಲ ಅಮೆರಿಕದಲ್ಲೂ ಇದೆ. ಒಂದೇ ವ್ಯತ್ಯಾಸವೆಂದರೆ ನಮ್ಮಲ್ಲಿ ಹಣ ಮಾಡಲು ಅಡ್ಡದಾರಿ ಹಿಡಿದರೆ, ಅವರು ಉದ್ದಿಮೆ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ‌. ನೇರವಾಗಿ ಲಂಚ ರುಷುವತ್ತು ಇಲ್ಲ, ಅಷ್ಟರಮಟ್ಟಿಗೆ ಪ್ರಾಮಾಣಿಕರು. ಇದು ಪರೋಕ್ಷವಾಗಿ ಭ್ರಷ್ಟಾಚಾರದ ವ್ಯಾಪ್ತಿಗೆ ಬರುತ್ತದೆ. ಏಕೆಂದರೆ, ವಿಶ್ವದ ಪ್ರಭಾವಿ ರಾಷ್ಟ್ರದ ನಾಯಕನ ಒಡೆತನದ ಉದ್ದಿಮೆಗಳಿಗೆ ಯಾವುದೇ ರಾಷ್ಟ್ರವಾದರೂ ಕೆಂಪು ಹಾಸಿನ ಸ್ವಾಗತದ ಜೊತೆಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ, ಓಲೈಸುವ ಪ್ರಯತ್ನ ಮಾಡುವುದು ಸಹಜವೇ ತಾನೇ? ಹಾಗೆ ಸಿಗುವ ಲಾಭ ಸಂಪೂರ್ಣವಾಗಿ ಪ್ರಾಮಾಣಿಕ ಸಂಪಾದನೆ ಎನಿಸುವುದೇ?

ಇನ್ನು ಅಮೇರಿಕದ ಚುನಾವಣಾ ಪ್ರಕ್ರಿಯೆಯನ್ನು ನೋಡುವುದಾದರೆ, ಮುಂದಿನ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಈಗಿನ ಅಧ್ಯಕ್ಷರು ಅಧಿಕಾರ ಸ್ವೀಕರಿಸಿದ ಮರು ವರ್ಷದಿಂದಲೇ ಆರಂಭವಾಗುತ್ತದೆ. ಅಂದರೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಜನರು ದೇಶದ ಅಧ್ಯಕ್ಷರ ಆಯ್ಕೆಗೆ ಮತ ಚಲಾವಣೆ ಮಾಡಿದರೂ ನಮ್ಮ ದೇಶದಲ್ಲಿರುವಂತೆ, ಒಂದೇ ಹಂತದ ಚುನಾವಣೆ ಇದಲ್ಲ. ಆದ್ದರಿಂದ ಚುನಾವಣಾ ನೀತಿ ಸಂಹಿತೆ ಎಂಬ ನಿರ್ಬಂಧ ಇಲ್ಲ. ಮತದಾರರ ಓಲೈಸುವಿಕೆ ಇದ್ದರೂ ನಮ್ಮಲ್ಲಿರುವಂತೆ ಒಳದಾರಿಗಳಿಲ್ಲ.

ಪ್ರತಿ ರಾಜ್ಯವು ಹೊಂದಿರುವ ಮತದಾರರ ಸಂಖ್ಯೆಯನ್ನು ಅವಲಂಬಿಸಿ ಆಯಾ ರಾಜ್ಯದ ಪ್ರತಿನಿಧಿಗಳ ಸಂಖ್ಯೆಯಿರುತ್ತದೆ.ಒಟ್ಟು ಐವತ್ತು ರಾಜ್ಯಗಳಿದ್ದು ಒಂದೊಂದು ರಾಜ್ಯದಲ್ಲಿ ಕನಿಷ್ಟ ಮೂರಕ್ಕಿಂತ ಹೆಚ್ಚು ಪ್ರತಿನಿಧಿಗಳಿರುತ್ತಾರೆ. ಇದಕ್ಕೆ ಸದಸ್ಯರನ್ನು ಪ್ರತೀ ವರ್ಷ ಸರದಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಒಟ್ಟು 435 ಪ್ರತಿನಿಧಿಗಳು ಮತ್ತು 100 ಸೆನೆಟರ್‌ ಸೇರಿದಂತೆ ಸ್ಥಾಪಿತವಾದ ಎಲೆಕ್ಟ್ರೋರಲ್ ಕಾಲೇಜಿನಲ್ಲಿ ಕನಿಷ್ಠ 270 ಮತಗಳಿಸಿದವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಈ ಹಂತದ ಮತದಾನ ಇದೇ ಡಿಸೆಂಬರ್ 14ಕ್ಕೆ ನಿಗದಿಯಾಗಿದ್ದು ಅಂದು ಮುಂದಿನ ಅಧ್ಯಕ್ಷರು ಯಾರೆಂಬುದು ಖಚಿತವಾಗಿ ತಿಳಿಯುತ್ತದೆ. ಹೆಚ್ಚು ಮತಗಳನ್ನು ಪಡೆದವರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಪ್ರತ್ಯೇಕ ಮತದಾನವಿದೆ. ಅಧ್ಯಕ್ಷ ಪದವಿಗೆ ನೇರವಾಗಿ ಜನರು ಮತದಾನ ಮಾಡುವ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆ ಒಂದಾದರೆ, ಕಾಲಕಾಲಕ್ಕೆ ಆಯ್ಕೆಯಾದ ಪ್ರತಿನಿಧಿಗಳಿರುವ ಎಲೆಕ್ಟ್ರೋರಲ್ ಕಾಲೇಜಿನಲ್ಲಿ ಎರಡನೇ ಹಂತದ ಮತದಾನ ನಡೆಯುತ್ತದೆ. ಇದರ ಸದಸ್ಯರು ಯಾವ ಪಕ್ಷದಿಂದ ಆಯ್ಕೆಯಾಗಿರುತ್ತಾರೋ ಅದೇ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕೆಂಬ ನಿಯಮ ಇಲ್ಲ, ಆದ್ದರಿಂದ ಇಂದಿನ ಚಿತ್ರಣ ಅಂತಿಮವಾಗಿ ಬದಲಾದರೆ ಆಶ್ಚರ್ಯವಿಲ್ಲ‌. ಅಧ್ಯಕ್ಷ ಪದವಿಗೆ ಆಯ್ಕೆಯಾಗಲು ಇರಬೇಕಾದ ಅರ್ಹತೆಗಳು ಕನಿಷ್ಟ 35 ವರ್ಷ ವಯಸ್ಸಾಗಿರಬೇಕು, (ಗರಿಷ್ಠ ವಯೋಮಿತಿ ಇಲ್ಲ) ಅಮೇರಿಕದಲ್ಲಿ ಜನಿಸಿರಬೇಕು, ಹಾಗೂ ಕನಿಷ್ಟ 14 ವರ್ಷಗಳಿಂದ ಅಮೇರಿಕದಲ್ಲಿ ವಾಸವಾಗಿರಬೇಕು. ಆದರೆ ಯಾರೂ ಎರಡು ಅವಧಿಗಿಂತ ಹೆಚ್ಚು ಬಾರಿ ಸ್ಪರ್ಧಿಸುವಂತಿಲ್ಲ. ಉಪಾಧ್ಯಕ್ಷರಾಗಿ ಆಯ್ಕೆಯಾದವರು ಮತ್ತೊಂದು ಅವಧಿಯಲ್ಲಿ ಅಧ್ಯಕ್ಷ ಪದವಿಗೆ ಸ್ಪರ್ಧಿಸಬಹುದು. ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ ಉಪಾಧ್ಯಕ್ಷರಾಗಿದ್ದ ಜೋ ಬಿಡೆನ್ ಈ ಸಾಲಿನ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ. ಅಮೇರಿಕದಲ್ಲಿ ಹಲವಾರು ರಾಜಕೀಯ ಪಕ್ಷಗಳಿದ್ದರೂ ಎಲ್ಲಾ ಪಕ್ಷಗಳಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಸ್ಪರ್ಧೆಗೆ ಅರ್ಹತೆ ಪಡೆಯಬೇಕಾದರೆ ಜನರಿಂದ ನಿರ್ದಿಷ್ಟ ಪ್ರಮಾಣದ ಬೆಂಬಲವಿರಬೇಕು. ಸಾಮಾನ್ಯವಾಗಿ ರಿಪಬ್ಲಿಕನ್(ಟ್ರಂಪ್) ಮತ್ತು ಡೆಮಾಕ್ರಟಿಕ್ (ಜೋ ಬಿಡೆನ್) ಪಕ್ಷಗಳ ನಡುವೆ ಮಾತ್ರ ಸ್ಪರ್ಧೆಯಿರುತ್ತದೆ.

ವೈಶಿಷ್ಟ್ಯಮಯ ಪ್ರಚಾರ

ನಮ್ಮ ದೇಶದಲ್ಲಿರುವಂತೆ ವೈಯಕ್ತಿಕ ಮತ್ತು ಕೀಳುಮಟ್ಟದ ಭಾಷೆಯ ಪ್ರಯೋಗ ಇಲ್ಲ. ರೋಡ್ ಶೋ, ಸಾರ್ವಜನಿಕ ಭಾಷಣಗಳು ಇದ್ದರೂ ಹೆಚ್ಚಿನ ಪ್ರಚಾರ ಅಂತರ್ಜಾಲ ಮೂಲಕ. ವಾಹಿನಿಗಳು ನೇರಾನೇರ ಸಂವಾದ ಏರ್ಪಡಿಸುತ್ತವೆ. ನಿರ್ದಿಷ್ಟ ವಿಷಯದಲ್ಲಿ ಎರಡೂ ಅಭ್ಯರ್ಥಿಗಳು ಉತ್ತರ ನೀಡಬೇಕಾಗುತ್ತದೆ. ಒಬ್ಬರು ಮಾತನಾಡುವಾಗ ಇನ್ನೊಬ್ಬರು ನಡುವೆ ಮಾತನಾಡುವಂತಿಲ್ಲ. ಅರಚಾಟ-ಕಿರುಚಾಟಗಳಿಲ್ಲ. ಖಾಸಗಿ ವಿಚಾರಗಳನ್ನು ಪ್ರಸ್ತಾಪಿಸುವಂತಿಲ್ಲ. ಆರ್ಥಿಕ, ಅಂತರರಾಷ್ಟ್ರೀಯ ಮತ್ತು ಆಡಳಿತ ವೈಫಲ್ಯ, ಮುಂದಿನ ಕಾರ್ಯ ಯೋಜನೆ ಮುಂತಾದ ನಿರ್ದಿಷ್ಟ ವಿಷಯಗಳು ಮಾತ್ರ ಇಲ್ಲಿ ಚರ್ಚೆಗೆ ಬರುತ್ತದೆ.

90 ದಿನ ಮೊದಲೇ ಮತದಾನ ಪ್ರಕ್ರಿಯೆ ಮತದಾನ ಪ್ರಕ್ರಿಯೆ ಸುಮಾರು 90 ದಿನಗಳ ಮೊದಲೇ ಆರಂಭವಾಗುತ್ತದೆ, ಆದ್ದರಿಂದ ಮತದಾನಕ್ಕೆ ಕೊನೆಯ ಕ್ಷಣದ ಒತ್ತಡ ಇರುವುದಿಲ್ಲ. ಮತದಾನ ಪ್ರಕ್ರಿಯೆಯಲ್ಲೂ ಮೂರು ವಿಧದ ಆಯ್ಕೆಗಳಿವೆ. ಅಂತರ್ಜಾಲ ಮೂಲಕ, ಅಂಚೆ ಮತದಾನ ಮತ್ತು ನೇರವಾಗಿ ಮತಗಟ್ಟೆಗೇ ಹೋಗಿ ಮತ ಚಲಾವಣೆ. ಪ್ರತಿಯೊಂದು ಮತವೂ ಅಂತರ್ಜಾಲ ಮೂಲಕ ಗುರುತಿಸಲ್ಪಡುವುದರಿಂದ ಖೋಟಾ ಮತದಾನ ಅಥವಾ ಒಬ್ಬರು ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಲು ಅವಕಾಶವಿಲ್ಲ.ಕೊರೊನ ಮತ್ತು ಅಧ್ಯಕ್ಷೀಯ ಚುನಾವಣೆ ಕೊನೆಯದಾಗಿ ಆರಂಭದಲ್ಲಿ ಹೇಳಿದಂತೆ ರಾಜಕಾರಣಿಗಳು ಎಲ್ಲೆಡೆ ಒಂದೇ ರೀತಿ ಎನ್ನುವುದಕ್ಕೆ ಚಿಕ್ಕ ಉದಾಹರಣೆ: ಚುನಾವಣೆ ಉತ್ತುಂಗದ ಹಂತ ತಲುಪುತ್ತಿದೆಯೆನ್ನುವಾಗ ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಕೊರೊನ ಸೋಂಕು ದೃಡಪಟ್ಟಿದೆಯೆಂಬ ಸುದ್ದಿ ಹೊರ ಬಿದ್ದಿತ್ತು. ವಿಶ್ವಾದ್ಯಂತ ಯಾವುದೋ ಉತ್ಪಾತ ನಡೆದಂತೆ ಪ್ರಚಾರ ಮಾಡಲಾಯಿತು. ನಮ್ಮಲ್ಲಿ ಕೆಲವು ಮಾಧ್ಯಮಗಳಂತೂ ಹಾಲಿ ಅಧ್ಯಕ್ಷರು ಅಧಿಕಾರದಲ್ಲಿರುವಾಗಲೇ ಮೃತಪಟ್ಟರೆ ಅನುಸರಿಸುವ ಕಾರ್ಯವಿಧಾನದ ಬಗ್ಗೆ ಕೂಡಾ ವರದಿ ಮಾಡಿದ್ದವು. ಆದರೆ ವಯೋವೃದ್ಧರೂ,ವಯೋಸಹಜ ಆರೋಗ್ಯ ಸಮಸ್ಯೆಗಳಿದ್ದೂ, ಟ್ರಂಪ್ ಕೊರೊನ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾದ ನಾಲ್ಕೇ ದಿನಗಳಲ್ಲಿ ಬಿಡುಗಡೆಯಾಗಿ, ಎಂದಿನಂತೆ ಚುನಾವಣಾ ರ್ಯಾಲಿ ಸೇರಿದಂತೆ, ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿರುವುದನ್ನು ನೋಡಿದರೆ, ಎಲ್ಲೋ ಏನೋ ಎಡವಟ್ಟಾಗಿತ್ತು ಎನಿಸದೇ? ಸೂಕ್ಷ್ಮವಾಗಿ ಅವಲೋಕಿಸಿದರೆ ನೆಟ್ಟಿಗರ ಸಂಶಯಗಳು ನಿಜವಿರಬಹುದೇನೋ ಎಂಬ ಸಂಶಯ ಮೂಡುತ್ತಿದೆ. ಏಕೆಂದರೆ, ಒಂದೋ ಪಾಸಿಟಿವ್ ಬಂದದ್ದು ಸುಳ್ಳು, ಅಥವಾ ಈಗಾಗಲೇ ಕೊರೊನ ಚಿಕಿತ್ಸೆಗೆ ಔಷಧಿ ಇದೆ. ಅದನ್ನು ರಾಜಕೀಯ ಕಾರಣಗಳಿಂದ ಗುಟ್ಟಾಗಿ ಇರಿಸಿದ್ದು, ಚುನಾವಣೆ ಮುಗಿದ ಕೂಡಲೇ ಪ್ರಕಟಿಸುವ ಸಾಧ್ಯತೆ ಇದೆ. ಇದೆರಡೂ ಅಲ್ಲದಿದ್ದರೆ, ಕೇವಲ ನಾಲ್ಕು ದಿನಗಳಲ್ಲಿ ಅವರು ಸೋಂಕಿನಿಂದ ಮುಕ್ತರಾದದ್ದಾದರೂ ಹೇಗೆ?

ಭಾರತೀಯರೂ ನಿರ್ಣಾಯಕ

ದೇಶದಲ್ಲಿ ಒಟ್ಟು ಐವತ್ತು ರಾಜ್ಯಗಳಿದ್ದರೂ ಪೆನ್ಸಿಲ್ವೇನಿಯಾ, ಉತ್ತರ ಕೆರೋಲಿನಾ, ಅರಿಜೋನಾ, ಮಿಚಿಗನ್, ಜಾರ್ಜಿಯಾ, ಫ್ಲೋರಿಡಾ, ಮಿನ್ನಿಸೋಟಾ, ವಿಸ್ಕಾನ್ಸಿನ್-ಈ ಎಂಟು ರಾಜ್ಯಗಳ ಪ್ರತಿನಿಧಿಗಳು ಡಿಸೆಂಬರ್ 14ರಂದು ಚಲಾಯಿಸುವ ಮತಗಳೇ ನಿರ್ಣಾಯಕ. ವಿಶೇಷವೆಂದರೆ ಈ ರಾಜ್ಯಗಳಲ್ಲಿ ಇರುವ ಮತದಾರರಲ್ಲಿ ಬಹುಸಂಖ್ಯಾತರು ಭಾರತೀಯ ಮೂಲದವರು. ಆದ್ದರಿಂದ ಅಮೇರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಭಾರತೀಯರು ಎಷ್ಟು ಮುಖ್ಯವೆಂದು ಅರ್ಥವಾಗುತ್ತದೆ.

📰NewsKarkala


# *ಮೋಹನದಾಸ ಕಿಣಿ, ಕಾಪು*

Comments

Popular posts from this blog

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

Rainbow loader with html with CSS