ಹಿಂದುಗಳ ಪವಿತ್ರ 12 ಜ್ಯೋತಿರ್ಲಿಂಗಗಳ ನಡುವಿನ ಈ ರಹಸ್ಯ ಕಂಡು ವಿಜ್ಞಾನಿಗಳೇ ಬೆಚ್ಚಿಬಿದ್ದಾದ್ದಾರೆ!!! ಏನು ಆ ವಿಸ್ಮಯ ಗೊತ್ತೆ?
🤭🤭🤭 ಹಿಂದುಗಳ ಪವಿತ್ರ 12 ಜ್ಯೋತಿರ್ಲಿಂಗಗಳ ನಡುವಿನ ಈ ರಹಸ್ಯ ಕಂಡು ವಿಜ್ಞಾನಿಗಳೇ ಬೆಚ್ಚಿಬಿದ್ದಾದ್ದಾರೆ!!! ಏನು ಆ ವಿಸ್ಮಯ ಗೊತ್ತೆ? ನಮ್ಮ ಭಾರತದ ನೈಜ ಇತಿಹಾಸ, ಸನಾತನ ಹಿಂದೂಗಳ ಚಾಣಾಕ್ಷ ಬುದ್ಧಿಮತ್ತೆ, ಸಾಧನೆ ಹಾಗು ಅವರಿಗಿದ್ದ ಆಗಿನ ಕಾಲದ ವೈಜ್ಞಾನಿಕ ಮನೋಭಾವನೆಯನ್ನ ನಾವು ಈಗಲೂ ಅರಿತುಕೊಳ್ಳುವುದರಲ್ಲಿ ವಿಫಲರಾಗಿದ್ದೇವೆ. ಮೆಕಾಲೆ ಇಂಜೆಕ್ಟ್ ಮಾಡಿ ಹೋದ ಕಾನ್ವೆಂಟ್ ಎಂಬ ಭೂತಕ್ಕೆ ಬಲಿಯಾಗಿ ಈಗಲೂ ನಮ್ಮತನವನ್ನ, ನಮ್ಮ ಸಂಸ್ಕೃತಿಯನ್ನ ಮರೆತು ವಿದೇಶಿಗರೇ ಶ್ರೇಷ್ಟರು ಭಾರತೀಯರು ಕನಿಷ್ಠರು ಅನ್ನೋ ಭಾವನೆ ನಮ್ಮಲ್ಲಿ ಆಳವಾಗಿ ಬೇರೂರಿಬಿಟ್ಟವು ನಮ್ಮ ಪೂರ್ವಜರು, ಋಷಿಮುನಿಗಳ ಸಾಧನೆಯನ್ನ ನಮ್ಮ ದೇಶದ ತಥಾಕಥಿತ ಬುದ್ಧಿಜೀವಿಗಳು, ಸಂಶೋಧಕರೇ ಅಲ್ಲಗಳೆದು ಇಡೀ ಪ್ರಪಂಚದ ಎದುರು ತಲೆ ತಗ್ಗಿಸುವಂತಹ ಅನೇಕ ವಾದಗಳನ್ನು ಮಂಡಿಸಿ, ಸಂಶೋಧನೆಗಳನ್ನ ಮಾಡಿಯೇ ಈ ಮಾತನ್ನ ಹೇಳ್ತಿದೀವಿ ಅಂತ ಬೇರೆ ಪುಂಗಿ ಊದುತ್ತಾರೆ. ಅದರೆ ಭಾರತದ ಬಗ್ಗೆ ಮಾತು ಬಂದರೆ ವಿಶ್ವದ ಕಣ್ಣು ಈಗ ಭಾರತದ ಮೇಲೆ, ಭಾರತದಲ್ಲಿ ಏನೇ ಬದಲಾವಣೆಯಾದರೂ ಅದನ್ನ ಜಗತ್ತು ಅನುಸರಿಸುತ್ತೆ, ನಮ್ಮ ಪೂರ್ವಜರು ಇಡೀ ವಿಶ್ವ ಪರ್ಯಟನೆ ಮಾಡಿದವರು ಇಡೀ ಪ್ರಪಂಚಕ್ಕೆ ನಾಗರೀಕತೆಯ ಪಾಠ ಹೇಳಿಕೊಟ್ಟವರು ಅನ್ನೋದನ್ನ ನಾವು ಭಾರತದ ನೈಜ ಇತಿಹಾಸ ಹಾಗು ಭಾರತ ದರ್ಶನ ಮಾಡಿದರೆ ಅರ್ಥವಾಗುತ್ತದೆ. ವಿಶ್ವ ನಮ್ಮತ್ತ ತಿರುಗಿ ನೋಡುತ್ತೆ ಅನ್ನೋದಕ್ಕೆ ಕಾರಣವೇ ಇಲ್ಲಿನ ಹಿಂದೂ ಧರ್ಮ, ಸಂಸ್...