ಯೋಚನೆಯ ಪತ್ತೆದಾರ ಗ್ರಂಥ : ಬದುಕಲು ಕಲಿಯಿರಿ part : 34

 ಗ್ರಂಥ : ಬದುಕಲು ಕಲಿಯಿರಿ 

ಲೇಖಕರು  : ಸ್ವಾಮಿ ಜಗದಾತ್ಮಾನಂದಜಿ 

ಭಾಗ : 34 



ಯೋಚನೆಯ ಪತ್ತೆದಾರ 


ರಷ್ಯಾ ದೇಶದ ವೂಲ್ಸ್ ಮೆಸ್ಸಿಂಗ್ ತನ್ನ ಅತೀಂದ್ರಿಯ ಶಕ್ತಿಗಾಗಿ ಪ್ರಸಿದ್ಧನಾಗಿದ್ದ. ಇತರ ಮನಸ್ಸಿನಲ್ಲಿ ಏನಿದೆ? ಎಂಬುದನ್ನು ಅವನು ಸರಿಯಾಗಿ ಸ್ಪಷ್ಟವಾಗಿ ಓದಬಲ್ಲ ಸಿದ್ಧಿಯನ್ನು ಪಡೆದಿದ್ದ. ಸರ್ವಾಧಿಕಾರಿ ಸ್ಟಾಲಿನ್‌ನಿಂದ ಪರೀಕ್ಷಿತನಾಗಿ ಸೈ ಎನ್ನಿಸಿಕೊಂಡವನಾತ. ಜಗತ್ತಿನ ಅಂದಿನ ಪ್ರಮುಖರಲ್ಲಿ ಐನ್‌ಸ್ಟಿನ್, ಫ್ಲ್ಯಾಡ್ ಮತ್ತು ಗಾಂಧೀಜಿ ಇವರನ್ನು ಭೇಟಿಯಾಗಿ ತನ್ನ ಸಿದ್ಧಿಯನ್ನು ಪ್ರದರ್ಶಿಸಿ ಅವರನ್ನು ಬೆರಗುಗೊಳಿಸಿದ ಆತ, 1927 ರಲ್ಲಿ ಭಾರತಕ್ಕೆ ಬಂದಾಗ ಸಬರಮತಿ ಆಶ್ರಮದಲ್ಲಿ ಗಾಂಧೀಜಿಯನ್ನು ಕಂಡು ಮೌನವಾಗಿ ಅವರು ನೀಡಿದ ಆದೇಶವನ್ನು ಮಾಡಿ ತೋರಿಸಿದವನು. ಎರಡನೇ ಮಹಾ ಯುದ್ಧದ ಹೊತ್ತಿಗೆ ಹಿಟ್ಲರನ ಮೃತ್ಯುಪಾಶವನ್ನು  ಹೇಗೋ ತಪ್ಪಿಸಿಕೊಂಡು ಪೋಲೆಂಡನ್ನೂ ಬಿಟ್ಟು ರಷ್ಯಾಕ್ಕೆ ಬಂದು, ಸಾರ್ವಜನಿಕ ಪ್ರದರ್ಶನಗಳನ್ನು ನೀಡುತ್ತಿದ್ದರೂ, ವೈಯಕ್ತಿಕ ಹಾಗೂ ರಾಜಕೀಯ ಭವಿಷ್ಯಗಳನ್ನು ಕುರಿತು ಆತ ಹೇಳುತ್ತಿರಲಿಲ್ಲ. ನೆರೆದ ಜನರಲ್ಲಿ ಯಾರಾದರೂ ಮೌನವಾಗಿದ್ದು ಕೊಂಡು ಆತನಿಗೆ ಮಾನಸಿಕವಾಗಿ ಆಜ್ಞೆ ನೀಡಿದರೆ, ಅದನ್ನವನು ಗ್ರಹಿಸಿಕೊಂಡು ಅಂತೆಯೇ ವರ್ತಿಸುತ್ತಿದ್ದ. 'ನಾನು ಮಾಡಬೇಕೆಂದು ನೀವು ಹೇಳಲು ಬಯಸಿರುವ ಅಥವಾ ಸಂಕಲ್ಪಸಿರುವ  ಆಜ್ಞೆಯನ್ನು ಮಾತ್ರ ಮನಸ್ಸಿನಲ್ಲಿ ಸ್ಪಷ್ಟವಾಗಿ ಚಿಂತಿಸಿ' ಎಂದು ಪರೀಕ್ಷಕರಲ್ಲಿ ನಿವೇದಿಸಿಕೊಳ್ಳುವುದು ಅವನು ಅನುಸರಿಸುತ್ತಿದ್ದ ಕ್ರಮ. ಕೆಲವು ವರ್ಷಗಳ ಹಿಂದೆ ವೈದ್ಯಕೀಯ ವಿದ್ವಾಂಸರ ಮತ್ತು ವಿಜ್ಞಾನಿಗಳ ಎದುರಲ್ಲಿ ಆತ ಒಂದು ಪ್ರದರ್ಶನವನ್ನಿತ್ತ. ಪ್ರದರ್ಶವನನ್ನಿತ್ತ ಮೊದಲು ಯಾರ ಮುಖಭಾವವನ್ನೂ ಪರಿಶೀಲಿಸಬಾರದೆಂದು ಅವನ ಕಣ್ಣಿಗೆ ಬಟ್ಟೆ ಕಟ್ಟಿದ್ದರು. ಸಭೆಯಲ್ಲಿದ್ದ ಒಬ್ಬ ಡಾಕ್ಟರ್ ಮೊದಲೇ ನಿಶ್ಚಯ ಮಾಡಿಕೊಂಡಂತೆ ಮೌನವಾಗಿದ್ದುಕೊಂಡು ಒಂದು ಸೂಚನೆಯನ್ನು ಮನಸ್ಸಿನಲ್ಲೇ ಏಕಾಗ್ರತೆಯಿಂದ ಮೆಲುಕು ಹಾಕುತ್ತಿದ್ದರು. ಮೆಸ್ಸಿಂಗ್ ಮೊದಲು ಮೌನವಾಗಿದ್ದು ಅದನ್ನು ಗ್ರಹಿಸಿ, ಬಳಿಕ ಕಣ್ಣಿನ ಬಟ್ಟೆಯನ್ನು ತೆಗೆದುಹಾಕಿ ನಾಲ್ಕನೇ ನಂಬರಿನ ಕುರ್ಚಿಯ ಬಳಿ ನಿಂತುಕೊಂಡ. ಅಲ್ಲಿ ಕುಳಿತ ವ್ಯಕ್ತಿಯ ಕೋಟಿನ ಬಲಕಿಸೆಯಿಂದ ಒಂದು ಸ್ಪಾಂಜನ್ನೂ, ಕತ್ತರಿಯನ್ನೂ ತೆಗೆದುಕೊಂಡು ನೆರೆದ ಜನರಿಗೆ ತೋರಿಸಿ 'ಸ್ಪಾಂಜನ್ನು ಕತ್ತರಿಸಲು ಇಷ್ಟವಿಲ್ಲ' ಎಂದು ಹೇಳಿ ಸೀಮೆಸುಣ್ಣದಿಂದ ಒಂದು ನಾಯಿಯ ಚಿತ್ರವನ್ನು ಆ ಸ್ಪಾಂಜಿನ ಮೇಲೆ ಬರೆದ.


ಈ ಪ್ರಯೋಗದಲ್ಲಿ ಮುಖ್ಯ ತೀರ್ಪುಗಾರರಾಗಿ ಬಂದಿದ್ದ ಹಿರಿಯರು ಮಾನಸಿಕ ಆಜ್ಞೆಯನ್ನು ನೀಡಿದ ಡಾಕ್ಟರನ್ನು ವಿಚಾರಿಸಿದರು. ಆಜ್ಞೆಯನ್ನು ನೀಡಿದ ಡಾಕ್ಟರ್ ತಾನು ನಾಲ್ಕನೇ ನಂಬರಿನ ಕುರ್ಚಿಯಲ್ಲಿ ಕುಳಿತ ತನ್ನ ಸ್ನೇಹಿತನ ಕೋಟಿನ ಜೇಬಿನಲ್ಲಿರುವ ಸ್ಟಾಂಜನ್ನು ನಾಯಿಯ ಆಕಾರದಲ್ಲಿ ಕತ್ತರಿಸುವಂತೆ ಕಲ್ಪಿಸಿದ್ದು ನಿಜವೆಂದು ಒಪ್ಪಿಕೊಂಡ. ಮೆಸ್ಸಿಂಗ್ ಅವನ ಕಲ್ಪನೆಯನ್ನು ಓದಿ ಅಂತೆಯೇ ನಡೆದಿದ್ದ. ಆದರೆ ಒಂದು ಸಣ್ಣ ಬದಲಾವಣೆ ಅವರನ್ನು ಕೇಳಿ ಮಾಡಿದ್ದ.  ಎಲ್ಲರೂ ಮೆಸ್ಸಿಂಗನ ಅದ್ಭುತ ಸಿದ್ಧಿಯನ್ನು ಕಂಡು ಚಕಿತರಾದರು. ಮೆಸ್ಸಿಂಗ್ ಈ ಒಂದು ಪ್ರದರ್ಶನವನ್ನು ಮಾತ್ರ ನೀಡಿದುದಲ್ಲ ಎಂಬುದು ನೆನಪಿನಲ್ಲಿಡಬೇಕಾದ ಸಂಗತಿ.


 ಹಲವರು ಮೆಸ್ಸಿಂಗನನ್ನು ಮುತ್ತಿಕೊಂಡು 'ಇತರರ ಮನಸ್ಸಿನಲ್ಲಿರುವ ಯೋಚನೆಗಳನ್ನು ನೀನು ಹೇಗೆ ಓದುತ್ತಿ?' ಎಂದು ಕೇಳಿದರು. ಮೆಸ್ಸಿಂಗನ ಉತ್ತರ ಹೀಗಿದೆ:


'ಜನರು ಸ್ಪಷ್ಟವಾಗಿ ಮಾಡಿಕೊಂಡ ಯೋಚನೆಗಳು, ನೀಡುವ ಆದೇಶಗಳು ನನ್ನ ಮನಸ್ಸಿಗೆ ಚಿತ್ರರೂಪದಲ್ಲಿ ಬರುತ್ತವೆ. 


ಏನಾಶ್ಚರ್ಯ! ನಮ್ಮ ಯೋಚನೆಗಳೆಲ್ಲ ಚಿತ್ರಗಳೇ!


ಏನು ಅವುಗಳಿಗೆ ಸಂಚಾರಶಕ್ತಿಯೂ ಇದೆಯೆ?


 'ಹೌದು' ಎಂದಿದ್ದರು ನಮ್ಮ ದೇಶದ ಮನೀಷಿಗಳು. 'ಹೌದು' ಎನ್ನುತ್ತಿದ್ದಾರೆ ಈ ವಿಚಾರದಲ್ಲಿ ಸಂಶೋಧನೆ ಮಾಡಿದ ಆಧುನಿಕ ಪ್ರಯೋಗ ಪರಿಣತರು. 


'ಹೌದು' ಎಂದಿದ್ದರು ನಮ್ಮ ದೇಶದ ಮನೀಷಿಗಳು. 'ಹೌದು' ಎನ್ನುತ್ತಿದ್ದಾರೆ ಈ ವಿಚಾರ ದಲ್ಲಿ ಸಂಶೋಧನೆ ಮಾಡಿದ ಆಧುನಿಕ ಪ್ರಯೋಗ ಪರಿಣತರು.


 ಮುಂದುವರಿಯುವುದು..

Comments

Popular posts from this blog

Why is the Mona Lisa So Famous?

top 10 free computer automation software

Want to know how Deep Learning works? Here’s a quick guide for everyone.