ಮುಖಗಳು

ಕವಯಿತ್ರಿ ನನ್ನ ಹೆಂಡತಿ

ನನ್ನ ಮೊದಲ ಪ್ರಶ್ನೆ ನೀವು ಮದುವೆಯಾಗಿದ್ದೀರಾ ? ಇವನಿಗೇಕೆ ನಮ್ಮ ವೈಯಕ್ತಿಕ ವಿಷಯ ಎಂದು ನೀವು ಗೊಣಗಿಕೊಳ್ಳಬಹುದು. ಮದುವೆ ಯಾಗಿದ್ದರೆ ಇನ್ನೂ ಕೆಲವು ವೈಯಕ್ತಿಕ ಪ್ರಶ್ನೆಗಳನ್ನೇ ಕೇಳುತ್ತೇನೆ, ಏನೆಂದರೆ ನಿಮ್ಮ ಹೆಂಡತಿ ಸಾಹಿತಿಯೇ ಅಥವಾ ಕವಯಿತ್ರಿಯೇ ? ಎಂದು, ಕಾರಣ ಇಷ್ಟೆ. ನನ್ನ ಸ್ನೇಹಿತರಲ್ಲಿ ಕೆಲವರ ಪತ್ನಿಯರು ಸಾಹಿತಿಗಳಾಗಲು ಪ್ರಯತ್ನಿ ಸುತ್ತಿದ್ದಾರೆ. ಅವರೇ ಹೇಳಿಕೊಳ್ಳುವುದು ''ತಾವು ಮಹಾ ಸಾಹಿತಿಗಳೇ ''ಸಂಸಾರದ ಬವಣೆಯಲ್ಲಿ ಸಿಕ್ಕಿಕೊಂಡು ತಮ್ಮ ಸಾಹಿತ್ಯ ಕೃಷಿಯನ್ನು ವರಾಡ ಲಾಗುತ್ತಿಲ್ಲ. ನಮ್ಮ ಕೃತಿ ನಿಮ್ಮನ್ನು (ಅವರನ್ನು ನಂಬಿದ ಗಂಡಂದಿರನ್ನು) ಕೃಶರನ್ನಾಗಿ ಮಾಡಿದರೂ ಸಾಹಿತ್ಯದ ಬೆಳೆ ಬಲು ಹುಲುಸಾಗಿ ತೆಗೆಯಬಲ್ಲೆವು. ನಮ್ಮ ಕೈಗೆ ಪೆನ್ನು ಕೊಟ್ಟು ನೀವು ಸೌಟು ಹಿಡಿಯಿರಿ ಸಾಕು' ಎನ್ನುತ್ತಾರೆ. ಪಾಪ ನನ್ನ ಸ್ನೇಹಿತರಲ್ಲಿ ಕೆಲವರು ನಿಜವಾಗಲೂ ಈಗ ಸೌಟು ಹಿಡಿಯುತ್ತಿ ದ್ದಾರೆ. ಬೆಳಿಗ್ಗೆ ಆಫೀಸಿನಲ್ಲಿ ಪೆನ್ನು ಹಿಡಿದ ಕೈಗೆ ಸಂಜೆ ಮನೆಯಲ್ಲಿ ಸೌಟಿನ ಸೇವೆ ಆಗುತ್ತಿದೆ. ಇದು ಸಾಹಿತಿ ಪತ್ನಿಯರನ್ನು ಹೊಂದಿದವರ ಪಾಡಾದರೆ ಇನ್ನು ಗೊತ್ತಿಲ್ಲದೆ ಕವಯಿತ್ರಿಯರನ್ನು ಹೆಂಡಿರನ್ನಾಗಿ ನಾಲ್ಕು ಜನರ ಮುಂದೆ ಸಾಲಸೋಲ ಮಾಡಿ ಕೈಹಿಡಿದವರ ಗತಿ-ದೇವರೇ ಗತಿ. ವಂತರಲ್ಲಿ ನಾನೂ ಒಬ್ಬ ಅಂತಹ ಅದೃಷ್ಟ

ನಾನು ಅವಳು ಬರೆದ ಕವಿತೆಯೆನ್ನುವ 'ಕರ್ಣ ಶಿಕ್ಷೆ' ಅನುಭವಿಸಬೇಕು. “ಎನ್ನ ಕಿವುಡನ ವಕಾಡಯ್ಯ' ಎಂದು ದೇವರಲ್ಲಿ ನಾನು ಬೇಡಿಕೊಂಡಿದ್ದುಂಟು. ನನ್ನವಳಿಗೆ ''ನೀನು ಬರೆದಿರೋದನ್ನು ನಾನೇ ಓದಿಕೊಳ್ಳುತ್ತೇನೆ” ಎಂದರೆ “ನಿವರಿಗೆ ಕವಿತೆ ಓದಲು ಬರುತ್ತೇನೆ ಅದರ ಪ್ರಾಸರಸವನ್ನು ಕಸವನ್ನಾಗಿ ವರಾಡಿಬಿಡುತ್ತೀರಿ.” ಎಂದು ಕರ್ಕಶವಾಗಿ ಹೇಳಿಬಿಡುತ್ತಾಳೆ. “ಎಂಟುಗಂಟೆಗೆ ನಿವರಿಗೆ ಊಟ ಹಾಕೋದು ಈಗ ೭-೩೦. ನನ್ನ ಕವಿತೆ ಹಾಡ್ತೀನಿ ಕೇಳಿ'' ಎಂದು ತನ್ನದೆ ಆದ ಧ್ವನಿಯಲ್ಲಿ ಭಾವ ತುಂಬಿ ಕಣ್ಣ ಮುಚ್ಚಿ ಹಾಡಲು ಶುರುಮಾಡುತ್ತಾಳೆ. ಅಕ್ಕಪಕ್ಕದ ಮನೆಯವರಿಗೆ ಬೀದಿಯಲ್ಲಿ ಹೋಗು

-
-
-
ಎ. ಕಿರುಚಿಕೊಳ್ಳು ತ್ತಾನೆ. ತಲೆ ನೆಟ್ಟಗಿಲ್ಲವೆ, ಇಲ್ಲ ಹೆಂಡತಿಯೊಡ ಜಗವೆ - ನಮ್ಮ ಶಾಂತಿಗೆ ಭು ತರುತ್ತಾನಲ್ಲ ಎಂದು ಲೆಕ್ಕರಿಸಿ ನೋಡ ತಾರೆ. ಅವರಿಗೆಲ್ಲ ನಾನು ಹೇಗೆ ಹೇಳಲಿ, ನಾನಲ್ಲ ಹಾಡುವವನು ಗಂಡಸು ಧ್ವನಿಯ ನನ್ನ ಹೆಂಡತಿ ಎಂದು.

ನನ್ನವಳು ಭಾವತುಂಬಿ ಕಣ್ಮುಚ್ಚಿ ಹಾಡಲು ಶುರುಮಾಡಿದಾಗ ನಾನು ಅವಳು ಕಣ್ಣು ಮುಚ್ಚುವದನ್ನೇ ಕಾಯುತ್ತಿದ್ದು ನನ್ನ ಕೈಗಳಿಂದ ಎರಡೂ ಕಿವಿ ಮುಚ್ಚಿಕೊಳ್ಳುತ್ತೇನೆ. ಕವಿತೆ ಮುಗಿದು ಅವಳು ಕಣ್ಣು ಬಿಡುವ ಹೊತ್ತಿಗೆ ನಾನು ಕಿವಿಯಿಂದ ಬೆರಳು ತೆಗೆದು ತನ್ಮಯವಾಗಿ ಕೇಳುತ್ತಿರು ವನಂತೆ ಕಣ್ಮುಚ್ಚುತ್ತಿದ್ದೆ. ನನ್ನವಳಿಗೆ ಸಂತೋಷವಾಗಿ ನಡೀರಿ ಒಳಗೆ ಊಟಕ್ಕೆ ಹಾಕುತ್ತೇನೆ ೮ ಹೊಡೆಯಿತು" ಅಂದ ತಕ್ಷಣ ಸ್ವರ್ಗವೇ ಸಿಕ್ಕಿ ದಂತಾಗಿ ಜಗ್ಗನೆ ಎದ್ದು ಒಳಗೆ ಹೋಗುತ್ತೇನೆ.

ಇದಕ್ಕೆ ಪರಿಹಾರ ಕಾಣದೆ ಕೆಲವು ಕಾಲಾನಂತರ ನಾನು ಯೋಚಿಸಿದೆ. ನಾನೂ ಕವಿತೆ ಬರೆದು ಅವಳಿಗೆ ಓದಿ ಹೇಳಲು ಶುರುಮಾಡಿದರೆ .. ಅಂದರೆ ನನ್ನ ರಾಗದಲ್ಲಿ ಹಾಡಿ ತೋರಿಸಲು ಶುರುಮಾಡಿದರೆ ನನ್ನ ವಳಿಗೆ ಹಿಂಸೆಯ ನಿಜವಾದ ಅರ್ಥ ತಿಳಿದುಬರಬಹುದೆಂದು ಯೋಚಿಸಿ ಕವಿತೆ ಬರೆ ಯಲು ಶುರುಮಾಡಿದೆ. ಇದನ್ನು ಕಂಡು ಅವಳು ಕೇಳಿ, ಸರೋಜಿನಿನಾಯ ಪ್ರಸ್ತಕವನ್ನು ಪ್ರೌಢಶಾಲೆಯಲ್ಲಿ ಓದಿದ್ದೇನೆ. ಅವರಿಗೆ ಮಹಾತ್ಮಾಜಿ ಭಾರತದ ಕೋಗಿಲೆ ಎಂದು ಕರೆದದ್ದು ತಿಳಿದು ನನ್ನ ಭಾವನೆಯನ್ನು ಕೆಣಕಿ- ನನ್ನ ಕವಿತಾ ಶಕ್ತಿಯನ್ನು ಹೊಡೆದೆಬ್ಬಿಸಿತು. ಇಂದು ಭಾರತದ ಕೋಗಿಲೆ ಅನ್ನಿಸಿಕೊಳ್ಳ ದಿದ್ದರೂ, ಮನೆಯ ಕೋಗಿಲೆ ಎನ್ನಿಸಿಕೊಳ್ಳಬೇಕೆಂದು ಹಠ ಹಿಡಿದಿದ್ದೀನಿ. ನೀವು ಈಗ ಇದ್ದಕ್ಕಿದ್ದ ಹಾಗೆ ಬರೆಯಲು ಶುರುವರಾಡಿದ್ದೀರಲ್ಲಾ ಎಂಥ ವಿಚಿತ್ರ' ಎಂದು ನನ್ನ ಕೆಣಕಿ ಕವಿತೆ ಬರೆಯಲು ಶುರು ಮಾಡಿದ್ದಾಳೆ. ನನ್ನ ಹಳೆಯ ಸಂಪ್ರದಾಯ ಅವಳಿಗೆ ಹಿಡಿಸದಂತೆ. ಅವಳು ಹೇಳಿದಂತೆ ನಾನು ಕೇಳಿದರೆ ಜೀವನದಲ್ಲಿ ಸುಖವಿದೆಯಂತೆ, ಅವಳು ಬರೆದ ಕವಿತೆಯನ್ನು ನಿಮ್ಮ


ಮುಂದೆ ಹಾಡಿ ಬಡಿಯುತ್ತೇನೆ ಇಲ್ಲ ಓದುತ್ತೇನೆ, ಸ್ವಲ್ಪ ಕೇಳಿ, ದಯವರಾಡಿ ನಾನು ಕವಿತೆಯ ಎರಡು ಸಾಲು ಹೀಗೆ ಬರೆದಿದ್ದೆ : ತಾಳ್ಮೆ ಕಳೆದುಕೊಳ್ಳಬೇಡಿ

ಕೂವೂ ಕೂವೂ ಕೂಗಿತು ನಮ್ಮ ಮನೆಯ ಕೋಗಿಲೆ. ತಿಂದು ಹಾಕಿತ್ತು, ನಾ ತಂದ ಧಾನ್ಯಗಳನ್ನೆಲ್ಲ ಈ ನನ್ನ ಕೋಗಿಲೆ.

ಇದನ್ನು ಓದಿದವಳೆ ಕಿಡಿಕಿಡಿಯಾಗಿ ಸರಸ್ವತಿಗೆ, ಕವಿತೆಗೆ ಅವಮಾನ, ನಿಮಗೆ ಬುದ್ದಿ ಇಲ್ಲ ಎಂದು ಕೆಳಕಂಡಂತೆ ತನ್ನ ಕವಿತೆ ಹಾಡೇ ಬಿಟ್ಟಳು. ಸಾಕು ಸುಮ್ಮನಿರಿ ನಿಮ್ಮ ತಲೆ,

ಬರೆಯದ ಕವಿತೆ, ತಿಳಿಯದು ನಿವರಿಗೆ ಕಲೆ. ಕೋಗಿಲೆಯ ಕೂಗಿಗಿಂತ-ಸ್ಕೂಟರಿನ ಗಂಟರೇ ಚೆನ್ನ. ನಿವರಿಗೆ ಗೊತ್ತೇನಂ ಫ್ಯಾಷನ್ನು ಇರಬೇಕು ಎಲ್ಲ ಹೊಸಾ ಡಿಸೈನರಿ ನನಗೆಲ್ಲಿ ಬಿದ್ದಿರಿ ನೀವು ಗಂಟುಹಾಕಿ ಕೌಬಾಯ ಪ್ಯಾಂಟು, ತನ್ನಿ ನನಗೆ ವಿನಿಸ್ಕರ್ಟು-ನನಮಾತಿನಲಿ ಉಳಿತಾಯ ಉಂಟು. ಸೇರಿ ಎಲ್ಲರ ಜೊತೆ ಮಾಡಿ ನಂಟು-ಗೊತ್ತಿಲ್ಲ ನಿವರಿಗಿನ್ನು ನಾಗರಿಕತೆ

ಸೊಂಟ ಕಾಣುವ ತೆರದಿ ಸೀರೆಯುಟ್ಟು

ಮೈಗೆಲ್ಲ ತೀಡುವೆನು ಗುಲಾಬಿ ಸೆಂಟು. ನೋಡಿ ಹೇಗಿದೆ ನನ್ನ ತುರುಬಿನ ಗಂಟು ಬರಬೇಡಿ ನನ್ನ ಜೊತೆ ಜುಟ್ಟು ಬಿಟ್ಟು. ನನ್ನ ಹೆಸರಿಗೆ ಬ್ಯಾಂಕಿನಲಿ ಡಿಪಾಸಿಟ್ಟು ಇಡದಿದ್ದರೆ ಕಟ್ಟುವೆನು ತೌರಿಗೆ ಗಂಟು,

ನನಗಂತೂ ಸಾಕಾಗಿ ಹೋಗಿದೆ. ನಿಮಗೂ ಸಾಕಾಗಿರಬೇಕು, ಇಂಥ ಹೆಂಡರುಗಳ ಗಂಡಂದಿರಿಗೆ ನನ್ನ ಬುದ್ದಿವರಾತು ಎರಡು ಸಾಲಿನಲ್ಲಿ ಬರೆದು ತಿಳಿಸುತ್ತೇನೆ.

ನಿನಗೆಲ್ಲಿ ಇಡಲಿ, ಬ್ಯಾಂಕು ಡಿಪಾಜಿಟ್ಟು, ಬೇಗನೆ ದಯಮಾಡಿ ತೌರಿಗೆ ಗಂಟು ಕಟ್ಟು

ನಿಮಗೆ ಧೈರ್ಯವಿದ್ದರೆ ನನ್ನ ಎರಡು ಸಾಲನ್ನು ನಿಮ್ಮವರ ಮುಖ ಹೋಗಿ ಓದಿ ಹೇಳಿ,

ನಾನು ಮೊದಲೇ ನಿಮ್ಮನ್ನು ಮದುವೆಯಾಗಿದೆಯಾ ? ಎಂದು ಕೇಳಿದ ಎಂಬುದು ಈಗ ತಿಳಿಯಿತೆ ?





To be continued.....


ಗ್ರಂಥಸ್ಥ ಗಾಜಿಗಳ ಶಬ್ದಕೋಶ


| ಅವಗತ – ತಿಳಿದ
 ಅವಧಾನ – ಎಚ್ಚರ, ಭಕ್ತಿ ಮನ್ನುನ
ಅಪನಿ - ಭೂಮಿ 
 ಅವನೀಧರ - ಪರ್ವತ
ಅಭಿವಾದನ - ನಮುರ
ಅವಬೋಧ - ತಿಳಿಯುವುದು, ತಿಳಿವ
ಅಮರ್ (ಅವರು) - ಪ್ರಾಪ್ತವಾಗು, ಸೇರು
 ಅವಲು (ಅವರ್) - ಅವಲಕ್ಕಿ,
ಅಮರೇಶ್ವರ - ದೇವೇಂದ್ರ 
ಅಮೃತವರ – ಚಂದ್ರ
ಅವಿಶಥ – ಸತ್ಯ, ನಿಜ. ಸಾರ್ಥಕ
 ಅವಿದಗ್ನರ್ - ಅಪಂಡಿತರು, ಅಫ್ಘಾನಿಗಳು
ಆಲುಗೊಂಡವನು – ಬಾಯಾರಿದವನು
ಅರವಾವು – ಒಂದು ಬಗೆಯ ಹಾವು ಅಾಂತರ - ಅರ್ಥ ವ್ಯತ್ಯಾಸ
ಅವ ಅನ್ನ
ಅವುಡು = ಕೆಳತುಟಿ, ದವಡೆ
ಅಂಗಟ್ಟೆ - ಧರ್ಮಮಾರ್ಗ
ಆಶನಿ - ಇಂದ್ರನ ವಜ್ರಾಯುಧ, ಸಿಡಿಲು 
 ಅಶ್ರುಕಂಕಣಂ – ಕಣ್ಣೀರಿನ ಹನಿ
ಅ೦ದು - ಅಸಾಧ್ಯ
ಅಪಗ ಅಗಸ
- ನಿಗ್ರಹಿಸು
ಅಸಮಾನ - ಮುಳುಗುವಿಕೆ
ಅ‍ನೀರ್ - (ಆ‍ದ -ನೀರ್) ಒತ್ತಿದ ನೀರು, ನೀರಿಲ್ಲದ್ದು
ಅಸ್ತ ವಸ್ತ್ರ (ಅಸ್ತವ್ಯಸ್ತ) – ಅವ್ಯವಸ್ಥೆಯಿಂದ
ಅರುಗು - ಬೀಸು?
ಆಸಿಯಳು (ಅಸಿ) - ತೆಳ್ಳಗಿರುವ ಹೆಂಗಸು, 
ಅಸಿಯಕಲ್ಲು – ಗುಂಡುಕಲ್ಲು,
ಆಡುವ – ಅರಿವೆ, ಬಟ್ಟೆ 
ಅರುಣಾತ್ಮ – ಪದ್ಮರಾಗ, ಮಾಣಿಕ
ಅಸುರಾಂತಕ - ಶ್ರೀಕೃಷ್ಣ,
 ಅಕ್ಕಕ್ಕು – ರಸ್ತೆ, ಕ‌
ಮಹಾವಿಷ್ಣು
ಆರೆ – ಬಂಡ, ಕಲ್ಲು, ಶಿಲೆ, ಉಪಲ
ಅರೆಗೋಲೆ - ಮೃತ್ಯುಕಾರಕವಾದ
 ಅಹಗೆ - ಅವಂಗೆ, ಹಾಗೆ
ಅರೆಯಟ್ಟು - ಅನುಧಾವನ ಹೊಡೆದೋಡಿಸು
 ಅರುಂಧತಿ - ಒಂದು ನಕ್ಷತ್ರ
ಅಹಃಪತಿ - ಸೂರ್ಯ
ಅಳಟ ಸು - ಭಯಪಡಿಸು
ಅಳವಡಿಕೆ - ಹೊಂದಿಕೆ ಅಳವ - ಶಕ್ತಿಗುಂದು
ಅಅರ್ - ಹೂವು ಆಲರ್ಗಣೆ - ಹೂವಿನ ಬಾಣ
ಅಳಿ – ತುಂಬಿ, ಭ್ರಮರ
 ಅದ್ಯಮ - ಅಜೀರ್ಣ
ಅಲಸು - ತಡಮಾಡು, ಶ್ರಮಗೊಳ್ಳು, ದಣಿ
ಅಟ್ಕರ್ - ಪ್ರೀತಿ, ವ್ಯಾಮೋಹ  ಪ್ರೀತಿ, ಸಂತೋಷ
ಅಲಂಪ - ಸೊಗಸು
ಅಬ್ಬದಪ್ಪುದು (ಅಬ್ಬು) – ಹೆಚ್ಚು ಸುಡುತ್ತದೆ 
ಅಚ್ಯು - ಜೀರ್ಣವಾಗು
– ವಿಭವ
ಅರೆಯುವ ಕಲ್ಲು 
 ಜಪಾಟ - ಕರುಬ
ಅವಗಡಿಸು – ತೊಂದರೆಪಡಿಸು, ಧಿಕ್ಕರಿಸು
 ಅಳು - ಅಳುಕು, ಭಯಪಡು


Comments

Popular posts from this blog

Rainbow loader with html with CSS

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

top 10 free computer automation software