Posts

Showing posts from June, 2022

ಮುಖಗಳು

ಕವಯಿತ್ರಿ ನನ್ನ ಹೆಂಡತಿ ನನ್ನ ಮೊದಲ ಪ್ರಶ್ನೆ ನೀವು ಮದುವೆಯಾಗಿದ್ದೀರಾ ? ಇವನಿಗೇಕೆ ನಮ್ಮ ವೈಯಕ್ತಿಕ ವಿಷಯ ಎಂದು ನೀವು ಗೊಣಗಿಕೊಳ್ಳಬಹುದು. ಮದುವೆ ಯಾಗಿದ್ದರೆ ಇನ್ನೂ ಕೆಲವು ವೈಯಕ್ತಿಕ ಪ್ರಶ್ನೆಗಳನ್ನೇ ಕೇಳುತ್ತೇನೆ, ಏನೆಂದರೆ ನಿಮ್ಮ ಹೆಂಡತಿ ಸಾಹಿತಿಯೇ ಅಥವಾ ಕವಯಿತ್ರಿಯೇ ? ಎಂದು, ಕಾರಣ ಇಷ್ಟೆ. ನನ್ನ ಸ್ನೇಹಿತರಲ್ಲಿ ಕೆಲವರ ಪತ್ನಿಯರು ಸಾಹಿತಿಗಳಾಗಲು ಪ್ರಯತ್ನಿ ಸುತ್ತಿದ್ದಾರೆ. ಅವರೇ ಹೇಳಿಕೊಳ್ಳುವುದು ''ತಾವು ಮಹಾ ಸಾಹಿತಿಗಳೇ ''ಸಂಸಾರದ ಬವಣೆಯಲ್ಲಿ ಸಿಕ್ಕಿಕೊಂಡು ತಮ್ಮ ಸಾಹಿತ್ಯ ಕೃಷಿಯನ್ನು ವರಾಡ ಲಾಗುತ್ತಿಲ್ಲ. ನಮ್ಮ ಕೃತಿ ನಿಮ್ಮನ್ನು (ಅವರನ್ನು ನಂಬಿದ ಗಂಡಂದಿರನ್ನು) ಕೃಶರನ್ನಾಗಿ ಮಾಡಿದರೂ ಸಾಹಿತ್ಯದ ಬೆಳೆ ಬಲು ಹುಲುಸಾಗಿ ತೆಗೆಯಬಲ್ಲೆವು. ನಮ್ಮ ಕೈಗೆ ಪೆನ್ನು ಕೊಟ್ಟು ನೀವು ಸೌಟು ಹಿಡಿಯಿರಿ ಸಾಕು' ಎನ್ನುತ್ತಾರೆ. ಪಾಪ ನನ್ನ ಸ್ನೇಹಿತರಲ್ಲಿ ಕೆಲವರು ನಿಜವಾಗಲೂ ಈಗ ಸೌಟು ಹಿಡಿಯುತ್ತಿ ದ್ದಾರೆ. ಬೆಳಿಗ್ಗೆ ಆಫೀಸಿನಲ್ಲಿ ಪೆನ್ನು ಹಿಡಿದ ಕೈಗೆ ಸಂಜೆ ಮನೆಯಲ್ಲಿ ಸೌಟಿನ ಸೇವೆ ಆಗುತ್ತಿದೆ. ಇದು ಸಾಹಿತಿ ಪತ್ನಿಯರನ್ನು ಹೊಂದಿದವರ ಪಾಡಾದರೆ ಇನ್ನು ಗೊತ್ತಿಲ್ಲದೆ ಕವಯಿತ್ರಿಯರನ್ನು ಹೆಂಡಿರನ್ನಾಗಿ ನಾಲ್ಕು ಜನರ ಮುಂದೆ ಸಾಲಸೋಲ ಮಾಡಿ ಕೈಹಿಡಿದವರ ಗತಿ-ದೇವರೇ ಗತಿ. ವಂತರಲ್ಲಿ ನಾನೂ ಒಬ್ಬ ಅಂತಹ ಅದೃಷ್ಟ ನಾನು ಅವಳು ಬರೆದ ಕವಿತೆಯೆನ್ನುವ 'ಕರ್ಣ ಶಿಕ್ಷೆ' ಅನುಭವಿಸಬೇಕು. “ಎನ್ನ ಕಿವ...