ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ ನಮ್ಮ ಧರ್ಮಕ್ಕಾಗಿ ನಾನು ಮಾಡಿದ ಅಲ್ಪ ಸೇವೆ ನಿಮ್ಮ ಮೆಚ್ಚಿಗೆಯನ್ನು ಪಡೆಯಿತೆಂದು ಕೇಳಿ ನನಗೆ ಪರಮಾನಂದವಾಗಿದೆ. ದೂರದೇಶದಲ್ಲಿ, ಅದರಲ್ಲೂ ಪರದೇಶದಲ್ಲಿ ನನ್ನನ್ನು ಮತ್ತು ನನ್ನ ಕೆಲಸವನ್ನು ನೀವು ಮೆಚ್ಚುತ್ತೀರಿ ಎಂದು ಅಲ್ಲ ನನ್ನ ಸಂತೋಷ. ಹೊರಗಿನಿಂದ ಸೇನಾ ಸಮೂಹ ಭಾರತದ ಮೇಲೆ ಅವ್ಯಾಹತವಾಗಿ ಬಂದು ಬಿದ್ದಿದ್ದರೂ, ಹಲವಾರು ಶತಮಾನದ ನಿಮ್ಮ ನಿರ್ಲಕ್ಷ್ಯದಿಂದ ಮತ್ತು ನಿಮ್ಮ ವಿಜೇತರ ಅನಾದರಣೆಯಿಂದ ಆರ್ಯಾವರ್ತದ ಕೀರ್ತಿಕಳಶ ಕಾಣದ ಹಾಗೆ ಮಾನವಾಗಿದ್ದರೂ, ಕೀರ್ತಿ ಸೌಧದ ಹಲವು ಭೀಮಸ್ಥಂಭಗಳೂ ಸುಂದರವಾದ ಕಮಾನುಗಳೂ ಅದ್ಭುತ ವಾದ ಮೂಲೆಗಳಿಗೂ ಆ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿಹೋಗಿದ್ದರೂ, ಕೇಂದ್ರ ಭದ್ರವಾಗಿದೆ, ಕಮಾನಿನ ಮಧ್ಯದ ಕಲ್ಲು ಮಾತ್ರ ಅಚ್ಚಳಿಯದೆ ಇದೆ ಎಂಬುದನ್ನು ಇದು ತೋರುವುದು. ಆಧ್ಯಾತ್ಮಿಕ ತಳಹದಿಯ ಮೇಲೆ ಕಟ್ಟಿದ ಭಗವಂತನ ಮಹಾತ್ಮ ಮತ್ತು ವಿಶ್ವಕಾರುಣ್ಯ ಎಂಬ ಅದ್ಭುತ ಸ್ಮಾರಕಮಂದಿರದ ಮಹಾಸೌಧವು ಎಂದಿನಂತೆ ಇಂದಿಗೂ ಅಚ್ಚಳಿಯದೆ ನಿಂತಿದೆ' ಎನ್ನುವುದನ್ನು ತೋರುವುದು. ಭರತಖಂಡಕ್ಕೆ ಮತ್ತು ಇಡೀ ವಿಶ್ವಕ್ಕೆ ಸಂದೇಶವನ್ನು ಒಯ್ದ ಅಪೂರ್ವ ಭಾಗ್ಯ ನನ್ನದಾಗಿತ್ತು. ನನ್ನಂತಹ ಭಾರತ ಮಾತೆಯ ಕನಿಷ್ಠತಮ ದಾಸನನ್ನು ನೀವು ಮುಕ್ತಕಂಠದಿಂದ ಹೊಗಳಿರುವಿರಿ. ಆಜನ್ಮಸಿದ್ಧವಾದ ನಿಮ್ಮ ಆಧ್ಯಾತ್ಮಿಕ ಸ್ವಭಾವವು ಅವನಲ್ಲಿ ಮತ್ತು ಅವನ ಸಂದೇಶದಲ್ಲಿ ಮುಂದೆ ಬರಲಿರುವ ಆ
*ಹರಪನಹಳ್ಳಿಯಲ್ಲಿ 13 ವರ್ಷದ ಬಾಲಕನಿಗೆ ಕರೋನಾ ಸೊಂಕು ದೃಢ.* *ಬಾಣಗೇರಿ ಸೀಲ್ ಡೌನ್ ಕಂಟೇನ್ ಮೆಂಟ್ ಜೋನ್ ಎಂದು ಘೋಷಣೆ.* ಹರಪನಹಳ್ಳಿ : ಬಾಲಕನೊಬ್ಬನಿಗೆ ಕರೋನಾ ವೈರಸ್ ಇರುವುದು ದೃಢ ಪಟ್ಟ ಹಿನ್ನಲೆಯಲ್ಲಿ ಪಟ್ಟಣದ ಬಾಣಗೇರಿಯನ್ನು ಸೀಲ್ ಡೌನ್ ಮಾಡಿ ಕಂಟೇನ್ ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. 13 ವರ್ಷದ ಸೊಂಕಿತ ಬಾಲಕ ಹಾಗೂ ಆತನ ತಂದೆ ಗುಜರಾತ್ ನಿಂದ ಆಗಮಿಸಿದಾಗ ಅಧಿಕಾರಿಗಳು ತೋರಣಗಲ್ ಬಳಿ ಕ್ವಾರಂಟೈನ್ ನಲ್ಲಿ ಇಟ್ಟಿದ್ದರು. ತಂದೆಗೆ ದ್ರವ ಪರೀಕ್ಷೆ ನೆಗಟಿವ್ ಬಂದ ಹಿನ್ನಲೆಯಲ್ಲಿ ತಂದೆ ಜೊತೆ ಮಗನನ್ನು ಬಿಡುಗಡೆ ಮಾಡಲಾಗಿತ್ತು ಎಂದು ಹೇಳಲಾಗಿದೆ.ಬಾಲಕ ಮೆ.30 ರಂದು ಬೆಳಿಗ್ಗೆ ಹರಪನಹಳ್ಳಿ ಪಟ್ಟಣದ ಬಾಣಗೇರಿ ನಿವಾಸಕ್ಕೆ ಆಗಮಿಸಿದ್ದು, ಇಂದು ಆತನ ದ್ರವ ಪರೀಕ್ಷೆ ವರದಿ ಬಂದಿದ್ದು, ಕರೋನಾ ಇರುವುದು ದೃಢ ಪಟ್ಟಿದೆ. ಭಾನುವಾರ ಸಂಜೆ ಸೊಂಕಿತ ಬಾಲಕನನ್ನು ಬಳ್ಳಾರಿ ಕೋವಿಡ್ ಆಸ್ಪತ್ರೆಗೆ ಕಳಿಸಲಾಗಿದೆ, ಇತ್ತ ಬಾಣಗೇರಿಯಲ್ಲಿರುವ ಸೊಂಕಿತನ ಮನೆಯ 100 ಮೀಟರ ಸುತ್ತ ಕಂಪ್ಲೀಟ್ ಸೀಲ್ ಡೌನ್ ಮಾಡಲಾಗುವುದು, ನಂತರ 900 ಮೀಟರ್ ಬಪರ್ ಜೋನ್ ಎಂದು ಘೋಷಿಸಲಾಗುವುದು ಎಂದು ತಹಶೀಲ್ದಾರ ಡಾ.ನಾಗವೇಣಿ ತಿಳಿಸಿದರು. ಸೊಂಕಿತನ ಮನೆ ಬಳಿ ರಸಾಯನಿಕ ಸಿಂಪಡನೆ ಮಾಡಲಾಗಿದ್ದು, ಆತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರ ಪತ್ತೆ ಕಾರ್ಯನಡೆದಿದ್ದು, ಸಂಬಂಧ ಪಟ್ಟ ಎಲ್ಲರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಹೇಳಿದ್ದಾರೆ
Comments