How to be happy in these days?

How to be happy?

Sri Krishna told the brother to bring the worst told to call the religion of the Paramatma. At the same time, it was like to call the durance and brought a good one. Did the Dharmashaya go to go on allowo. What did the worst guy appear to have seen him. No matter how much the wandest was not found for Durshan. Due to? What's not worse in the eyes of the Lyrics: Duryodhana was like all the bad things. So if the world is good, do not be bad. Mean that all is our vision? Not sure. If we talk to the worst, the worst is the worst, our lives are nervous if they are bad. 'A cheat on the mick. I'm a good man who is a good idea of the impression of the impression. A friend of finding a good quality. It's working in spare time without finding that there are good qualities in one of the one. The time and strength that costs it is giving it happy. When we find the goodness, love confidence on those individuals, the dearness and believes. In our speech is full of goodness. When we show the good qualities of others, they will be confident for themselves, they still help their goodness grow. The enthusiasm is caused to be uplifted. We'll be overwhelmed when discovering good qualities in one of the one. The impression that the good qualities should be cultivated by ourselves, we have not been able to cover us. We are guides to those around us when we do not have our lives when we make up. The protagonist of the worst today is the worst of the worst to the worst of the bad examples: Another one that is not a long number of good examples and the ideal qualities model is folded everywhere. The one's mistake will make the mistake to see one's mistake. Take someone from anyone, not to condemn. So, good qualities will keep others tending to rise, and rise to others at least. 'I am good. But so think that it can not come forward in this time '- have asked many to say. Thus, we have been pushing the society as well as the individual's over-the-counter people. Again ourselves fidgets the worst behavior of society; ಕೋಪಿಸಿಕೊಳ್ಳುತ್ತೇವೆ; The mind will be tired. Some people think of 'my good qualities are not looking at the world'. Is this sadness to the impression that the world is for the best of the world? Ododi goes to the beasts of the scented flower, filled with honey. They do not call flowers. We are not for others to develop good qualities. Thus, we are happy to be happy with peace. Thus can not describe the traumatic pleasure of the air. If the good person is to try, the newspapers do not promote them because there is no good job, there is no 'wisdom' for good service. So where is the worst that seems to be filled with badness. Really do not have the situation. There are many high qualities in the person in the person to see in our eye. Will get in search of. Let's have a good service, and let's mark a good multiplicant in search of ourselves. Let's show up the good qualities in one of the one. So let's make awareness of us. Whether or not the world changes can not only tattle from, happiness. Possible to get a good friend. It is possible to develop good qualities in us.

ಸಂತೋಷದಿಂದ ಇರುವುದು ಹೇಗೆ?

ಶ್ರೀಕೃಷ್ಣ ಪರಮಾತ್ಮ ಒಂದು ಸಲ ಧರ್ಮರಾಯನನ್ನು ಕರೆದು ಕೆಟ್ಟವ ನೊಬ್ಬನನ್ನು ಹುಡುಕಿ ಕರೆತರಲು ಹೇಳಿದನಂತೆ. ಅದೇ ಸಮಯದಲ್ಲಿ ದುರ್ಯೋಧನನನ್ನೂ ಕರೆದು ಒಳ್ಳೆಯವನೊಬ್ಬನನ್ನು ಕರೆತರಲು ಹೇಳಿದನಂತೆ. ಧರ್ಮರಾಯ ಎಲ್ಲೆಲ್ಲೋ ಹೋಗಿ ಹುಡುಕಿದ. ಅವನಿಗೆ ಕೆಟ್ಟ ವ್ಯಕ್ತಿ ಯಾವನೂ ಕಾಣಿಸಲಿಲ್ಲ. ದುರ್ಯೋಧನನಿಗೂ ಎಷ್ಟು ಅಲೆದರೂ ಒಳ್ಳೆಯವನೊಬ್ಬ ಸಿಗಲಿಲ್ಲ. ಕಾರಣ?


ಧರ್ಮರಾಯನ ದೃಷ್ಟಿಯಲ್ಲಿ ಯಾವನೂ ಕೆಟ್ಟವನಲ್ಲ: ದುರ್ಯೋಧನನಿಗೆ ಎಲ್ಲ ಕೆಟ್ಟವರಂತೆಯೇ ಕಂಡರು.


ಹಾಗಾದರೆ ಪ್ರಪಂಚದಲ್ಲಿ ಒಳ್ಳೆಯವರಾಗಲಿ, ಕೆಟ್ಟವರಾಗಲಿ ಇಲ್ಲ. ಎಲ್ಲ ನಮ್ಮ ದೃಷ್ಟಿಯನ್ನವಲಂಬಿಸಿರುತ್ತದೆ ಎಂದು ಅರ್ಥವೇ?


ಖಂಡಿತಾ ಅಲ್ಲ. ನಾವು ಕೆಟ್ಟದ್ದನ್ನೇ ಮಾತನಾಡಿ, ಕೆಟ್ಟದ್ದನ್ನೇ ಬೆರಳು ಮಾಡಿ ತೋರಿಸಿ, ಕೆಟ್ಟದ್ದನ್ನೇ ನೆನೆಯುತ್ತಾ ಬಂದರೆ ನಮ್ಮ ಬದುಕು ನರಕವಾಗಿಬಿಡುತ್ತದೆ. 'ಮಿಕ್ಕವರೆಲ್ಲ ಮೋಸ. ನಾನೊಬ್ಬನೇ ಒಳ್ಳೆಯವನು' ಎಂಬ ಅನಿಸಿಕೆ ಗರ್ವವನ್ನೂ ಪೊಳ್ಳು ದೊಡ್ಡಸ್ತಿಕೆಯನ್ನೂ ಹೆಚ್ಚಿಸುತ್ತದೆ.


ಒಳ್ಳೆಯ ಗುಣವನ್ನು ಕಂಡುಹಿಡಿಯುವಿಕೆ


ಒಬ್ಬ ಮಿತ್ರರು. ಒಬ್ಬೊಬ್ಬರಲ್ಲೂ ಏನೇನು ಒಳ್ಳೆಯ ಗುಣಗಳಿವೆ ಎಂದು ಕಂಡುಹಿಡಿಯುವುದೇ ಅವರು ಬಿಡುವಿನ ವೇಳೆಯಲ್ಲಿ ಮಾಡುತ್ತಿದ್ದ ಕೆಲಸ. ಇದಕ್ಕೆ ಖರ್ಚಾಗುವ ಸಮಯ ಮತ್ತು ಶಕ್ತಿ ತನಗೆ ಸಂತೋಷ ಕೊಡುತ್ತಿದೆ ಎಂದವರು ಹೇಳಿದರು. ಒಳ್ಳೆಯತನವನ್ನು ನಾವು ಹುಡುಕಿ ಕಂಡುಹಿಡಿಯುವಾಗ, ಆ ವ್ಯಕ್ತಿಗಳ ಮೇಲೆ ಪ್ರೀತಿ ವಿಶ್ವಾಸ, ಆತ್ಮೀಯತೆ ಮತ್ತು ನಂಟು ಏರ್ಪಡುತ್ತದೆ. ನಮ್ಮ ಮಾತಿನಲ್ಲಿ ಒಳ್ಳೆಯತನ ತುಂಬಿಬರುತ್ತದೆ. ಇತರರ ಒಳ್ಳೆಯ ಗುಣಗಳನ್ನು ನಾವು ಬೆರಳು ಮಾಡಿ ತೋರಿಸುವಾಗ, ಅವರುಗಳಿಗೆ ಆತ್ಮವಿಶ್ವಾಸ ಬರುವುದಲ್ಲದೆ, ತಮ್ಮ ಒಳ್ಳೆಯತನವನ್ನು ಇನ್ನೂ ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ. ಉನ್ನತಿಗೇರಲು ಉತ್ಸಾಹ ಉಂಟಾಗುತ್ತದೆ.


ಒಳ್ಳೆಯ ಗುಣಗಳನ್ನು ಒಬ್ಬೊಬ್ಬರಲ್ಲೂ ಹುಡುಕಿ ಕ೦ಡುಹಿಡಿಯುವಾಗ ನಾವು ಮೇಲ್ಮಟ್ಟಕ್ಕೇರಿರುತ್ತೇವೆ. ಆ ಒಳ್ಳೆಯ ಗುಣಗಳನ್ನು ನಾವೂ ಬೆಳೆಸಿ ಕೊಳ್ಳಬೇಕು ಎಂಬ ಅನಿಸಿಕೆ ನಮಗರಿವಿಲ್ಲದಂತೆ ನಮ್ಮನ್ನು ಆವರಿಸಿರುತ್ತದೆ. ನಮ್ಮ ಬದುಕನ್ನು ನಾವು ರೂಪಿಸಿಕೊಳ್ಳುವಾಗ ನಮಗರಿವಿಲ್ಲದಂತೆ, ನಮ್ಮ ಸುತ್ತ ಇರುವವರಿಗೆ ನಾವು ಮಾರ್ಗದರ್ಶಿಗಳಾಗಿಬಿಡುತ್ತೇವೆ.


ಕೆಟ್ಟತನಗಳಿಗೆ ಮೂಲಕಾರಣ


ಇಂದು ಸಮಾಜದಲ್ಲಿ ಕಾಣಲ್ಪಡುವ ಕೆಟ್ಟತನಕ್ಕೆಲ್ಲಾ ಮೂಲಕಾರಣ : ಒಳ್ಳೆಯ ಉದಾಹರಣೆಗಳು ಬಹಳ ಸಂಖ್ಯೆಯಲ್ಲಿ ಇಲ್ಲ ಎಂಬುದು ಒಂದು ಮತ್ತು ಆದರ್ಶ ಗುಣಗಳ ಮಾದರಿ ಎಲ್ಲೆಲ್ಲೂ ಮುಚ್ಚಿಹೋಗಿದೆ ಎಂಬುದು ಇನ್ನೊಂದು. ಒಬ್ಬರ ತಪ್ಪನ್ನು ನೋಡಿ ಇನ್ನೊಬ್ಬರು ತಪ್ಪು ಮಾಡುತ್ತಾರೆ. ಯಾರಿಂದಲೂ ಯಾರನ್ನೂ ತಿದ್ದಲು, ಖಂಡಿಸಲು ಆಗುವುದಿಲ್ಲ. ಆದ್ದರಿಂದ, ಒಳ್ಳೆಯ ಗುಣಗಳನ್ನು ನಾವು ಕೊನೆತನಕ ಉಳಿಸಿಕೊಂಡು ಬಾಳುವುದು, ಅಪರೋಕ್ಷವಾಗಿ ಇತರರನ್ನು ತಿದ್ದಲು ಅನುವಾಗುತ್ತದೆ.


'ನಾನು ಒಳ್ಳೆಯವನಾಗಿ ಇದ್ದೇನೆ. ಆದರೆ ಹಾಗೆ ಇದ್ದು ಈ ಕಾಲದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ' - ಎಂದು ಅನೇಕರು ಹೇಳು ವುದನ್ನು ಕೇಳಿದ್ದೇವೆ. ಹೀಗೆ ಹೇಳಿಕೊಂಡೇ ಒಬ್ಬರ ಮೇಲೊಬ್ಬರು ಸ್ಪರ್ಧಿಸುತ್ತ ವ್ಯಕ್ತಿಗಳನ್ನೂ ಸಮಾಜವನ್ನೂ ಅಧೋಗತಿಗೆ ತಳ್ಳುತ್ತಿದ್ದೇವೆ. ಮತ್ತೆ ನಾವೇ ಸಮಾಜದ ಕೆಟ್ಟ ನಡವಳಿಕೆಯ ಬಗ್ಗೆ ಚಡಪಡಿಸುತ್ತೇವೆ; ಕೋಪಿಸಿಕೊಳ್ಳುತ್ತೇವೆ; ಮನಸ್ಸು ಕೆಡಿಸಿಕೊಳ್ಳುತ್ತೇವೆ.


'ನನ್ನ ಒಳ್ಳೆಯ ಗುಣಗಳನ್ನು ಪ್ರಪಂಚ ನೋಡುತ್ತಿಲ್ಲವಲ್ಲ' ಎಂದು ಕೆಲವರು ಚಿಂತಿಸುತ್ತಾರೆ. ಅದೂ ಪ್ರಪಂಚದ ಒಳಿತಿಗಾಗಿ ಎಂಬ ಅನಿಸಿಕೆ ಅವರಿಗೆ ಈ ದುಃಖ ಅಗತ್ಯವೇ? ಜೇನು ತುಂಬಿದ, ಸುವಾಸಿತ ಪುಷ್ಪವನ್ನು ಅರಸಿ ದುಂಬಿಗಳೂನೊಣಗಳೂ ಓಡೋಡಿ ಹೋಗುತ್ತವೆ. ಅವುಗಳನ್ನು ಹೂವುಗಳು ಪ್ರಚಾರ ಮಾಡಿ ಕರೆಯುವುದಿಲ್ಲ. ನಾವು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುವುದು ಇತರರಿಗಾಗಿ ಅಲ್ಲ. ಹೀಗೆ ಬಾಳುವುದರಿಂದ ನಮಗೆ ಸಂತೋಷವೂ ಶಾಂತಿಯೂ ಧಾರ್ಮಿಕ ಶಕ್ತಿಯೂ ದೊರಕುತ್ತವೆ. ಹೀಗೆ ಬಾಳುವುದರಿಂದ ಏರ್ಪಡುವ ಸಾತ್ವಿಕ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ.


ಪ್ರಯತ್ನಿಸಿದರೆ ಸಾಧ್ಯ


ಒಳ್ಳೆಯ ವ್ಯಕ್ತಿ, ಒಳ್ಳೆಯ ಕೆಲಸ, ಒಳ್ಳೆಯ ಸೇವೆ ಮೊದಲಾದುವುಗಳಲ್ಲೆಲ್ಲಾ 'ಸ್ವಾರಸ್ಯ' ಇಲ್ಲದಿರುವುದರಿಂದ ಪತ್ರಿಕೆಗಳು ಅವುಗಳನ್ನು ಪ್ರಚಾರ ಮಾಡುವುದಿಲ್ಲ. ಆದ್ದರಿಂದ ಎಲ್ಲಿ ನೋಡಿದರೂ ಕೆಟ್ಟತನವೇ ತುಂಬಿ ತುಳುಕಾಡುತ್ತಿರುವಂತೆ ತೋರುತ್ತದೆ.


ನಿಜವಾಗಿಯೂ ಪರಿಸ್ಥಿತಿ ಹೀಗಿಲ್ಲ. ನಮ್ಮ ಕಣ್ಣಿಗೆ ಕಾಣದಂತೆ ವ್ಯಕ್ತಿಯಲ್ಲಿ ಹಲವು ಉನ್ನತ ಗುಣಗಳು ಇರುವುದು ಸಾಧ್ಯ ಇವೆ. ಹುಡುಕಿದರೆ ಸಿಗುತ್ತದೆ. ಒಳ್ಳೆಯ ಸೇವೆ ಮಾಡುತ್ತಿರುವವರನ್ನು, ಒಳ್ಳೆಯ ಗುಣಾತಿಶಯದವರನ್ನು ನಾವೇ ಹುಡುಕಿಕೊಂಡು ಹೋಗಿ ಗುರುತು ಮಾಡಿಕೊಳ್ಳೋಣ. ಒಬ್ಬೊಬ್ಬರಲ್ಲೂ ಇರುವ ಒಳ್ಳೆಯ ಗುಣಗಳನ್ನು ಅವರವರಿಗೆ ತೋರಿಸೋಣ. ಹೀಗೆ ನಮ್ಮಲ್ಲಿ ಅರಿವು ಮೂಡಿಸಿಕೊಳ್ಳೋಣ.


ಪ್ರಪಂಚ ಬದಲಾಯಿಸುತ್ತದೆಯೋ ಇಲ್ಲವೋ ನಾವು ಮಾತ್ರ ಸಂತೋಷ ದಿಂದ, ನೆಮ್ಮದಿಯಿಂದ ಬಾಳಲು ಸಾಧ್ಯ. ಒಳ್ಳೆಯ ಮಿತ್ರರನ್ನು ಪಡೆದುಕೊಳ್ಳಲು ಸಾಧ್ಯ. ನಮ್ಮಲ್ಲೇ ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಉನ್ನತಿಗೇರಲು ಸಾಧ್ಯ.


Comments

Popular posts from this blog

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ