Penguin's foot on the ice - facts


Penguin's foot on the ice

Penguins do not fly, though they belong to the bird. About 80 per cent of these live on the sea side and eat fish. All know that they live in the Antarctic Territory. However, these can also occur in areas of the southern hemisphere, such as Australia, near the equator, where they may be foggy. Aren't the feet under the snow so tight that our feet cling to the snow as we walk on the ice? So we can’t walk on the ice. The penguin body is always 30 degrees centigrade, so their feet are always cool.So when they stand, their footwear does not melt. Because of this, the penguin does not stick to the foot mist as it does not rehydrate. Blood circulation in the legs is controlled by a single measurement as penguin feet are constantly cool. Their ankle structure. The blood vessels in their legs, arteries, and muscles around the feet are folded and widened when needed. This allows the blood circulation in their legs to be completely controlled, where the temperature is slightly above zero degrees. The blood at that temperature of the feet adjusts to the body's temperature when it re-enters the body. The blood flows through the warm arteries and adjusts to the body temperature. Anatomy of these penguins. This is why they can walk smoothly without any hassle on the ice.

TRANSLATED FROM KANNADA

 ಮಂಜಿಗೆ ಅoಟದ ಪೆಂಗ್ವಿನ್ ಪಾದ

 ಪೆಂಗ್ವಿನ್‌ಗಳು ಪಕ್ಷಿಜಾತಿಗೆ ಸೇರಿದವೇ ಆದರೂ ಹಾರಲಾರವು . ಇವುಗಳಲ್ಲಿ ಸುಮಾರು ಶೇ .80 ರಷ್ಟು ಸಮುದ್ರ ಬದಿಗಳಲ್ಲೇ ವಾಸಿಸುತ್ತಾ ಮೀನು ಹಿಡಿದು ತಿನ್ನುತ್ತವೆ . ಇವು ಅಂಟಾರ್ಟಿಕ್ ಪ್ರಾಂತ್ಯದಲ್ಲೇ ಬದುಕುತ್ತವೆಂದೇ ಎಲ್ಲಾ ತಿಳಿದಿದ್ದಾರೆ . ಆದರೆ , ಇವು ದಕ್ಷಿಣಾರ್ಧಗೋಳದಲ್ಲಿ ಭೂಮಧ್ಯ ರೇಖೆಗೆ ಹತ್ತಿರವಿರುವ ಆಸ್ಟ್ರೇಲಿಯಾ ಮುಂತಾದ ಪ್ರದೇಶಗಳಲ್ಲೂ ಇವ , ಮಂಜನ ಮೇಳ ಲೀಲಾಜಾಲವಾಗಿ ನಡೆಯಬಲ್ಲವು . ನಾವು ಮಂಜಿನ ಮೇಲೆ ನಡದರ ಪಾದದ ಕೆಳಗಿನ ಮಂಜು ಗಟ್ಟಿಯಾಗಿ ನಮ್ಮ ಕಾಲುಗಳು ಹಿಮಕ್ಕೆ ಅಂಟಿಕೊಳ್ಳುತ್ತವಲ್ಲವೇ ? ಹಾಗಾಗಿ ನಾವು ಮಂಜಿನ ಮೇಲೆ ನಡೆಯಲಾಗುವುದಿಲ್ಲ . ಪೆಂಗ್ವಿನ್ ದೇಹ ಯಾವಾಗಲೂ 30 ಡಿಗ್ರಿ ಸೆಂಟಿಗ್ರೇಡ್ ಉಷ್ಟದಲ್ಲಿರುವುದರಿಂದ ಅವುಗಳ ಪಾದಗಳು ಸದಾ ತಂಪಾಗಿಯೇ ಇರುತ್ತವೆ . ಹಾಗಾಗಿ ಅವು ನಿಂತಾಗ ಅವುಗಳ ಪಾದದಡಿಯ ಹಿಮ ಕರಗುವುದಿಲ್ಲ . ಈ ಕಾರಣದಿಂದಾಗಿ ಪುನರ್‌ ಘನೀಕರಣವಾಗುವುದಿಲ್ಲವಾದ್ದರಿಂದ ಪೆಂಗ್ವಿನ್ ಪಾದ ಮಂಜಿಗೆ ಅಂಟಿಕೊಳ್ಳುವುದಿಲ್ಲ . ಪೆಂಗ್ವಿನ್ ಪಾದಗಳು ನಿರಂತರವಾಗಿ ತಂಪಾಗಿಯೇ ಇರುವಂತೆ ಅವುಗಳ ಕಾಲಲ್ಲಿ ರಕ್ತ ಪರಿಚಲನ ಒಂದೇ ಅಳತೆಗೆ ನಿಯಂತ್ರಣದಲ್ಲಿರುತ್ತದೆ . ಅವುಗಳ ಪಾದದ ರಚನಯ ಹಾಗಿದೆ . ಅವುಗಳ ಕಾಲುಗಳಲ್ಲಿರುವ ರಕ್ತನಾಳಗಳು , ಧಮನಿಗಳು , ಪಾದದ ಸುತ್ತ ಇರುವ ಸ್ನಾಯುಗಳು ಬೇಕಾದಾಗ ಮಡಚಿಕೊಳ್ಳುತ್ತಾ , ಅಗಲವಾಗುತ್ತಾ ಇರುತ್ತವೆ . ಇದರಿಂದಾಗಿ ಅವುಗಳ ಕಾಲುಗಳಲ್ಲಿನ ರಕ್ತ ಪರಿಚಲನ ಸಂಪೂರ್ಣ ನಿಯಂತ್ರಣದಲ್ಲಿದ್ದು , ಅಲ್ಲಿನ ಉಷ್ಣಾಂಶ ಸೊನ್ನ ಡಿಗ್ರಿಗಿಂತ ಸ್ವಲ್ಪಮಟ್ಟಿಗೆ ಹೆಚ್ಚಾಗಿರುತ್ತದೆ ಅಷ್ಟೇ . ಪಾದಗಳ ಆ ಉಷ್ಣಾಂಶದಲ್ಲಿರುವ ರಕ್ತವು ಪುನಃ ದೇಹದೊಳಕ್ಕೆ ಸಂಚಾರವಾಗುವಾಗ ದೇಹದ ಉಷ್ಣಾಂಶಕ್ಕೆ ಅನುಗುಣವಾಗಿ ಹೊಂದಿಕೊಳ್ಳುತ್ತದೆ . ಆ ರಕ್ತ ಅನಕ ರಕ್ತನಾಳಗಳು , ಬಿಸಿಯಾಗಿರುವ ಧಮನಿಗಳ ಮೂಲಕ ಪ್ರವಹಿಸಿ ದೇಹದ ಉಷ್ಣಾಂಶಕ್ಕೆ ಸರಿಹೊಂದುವಂತೆ ಚಲನಯಾಗುತ್ತದೆ . ಇದೇ ಪೆಂಗಿನ್‌ಗಳ ದೇಹರಚನೆಯ ಗುಟ್ಟು . ಆದ್ದರಿಂದಲೇ ಅವು ಹಿಮದ ಮೇಲೆ ಯಾವುದೇ ತೊಂದರೆಯೂ ಇಲ್ಲದ ಸರಾಗವಾಗಿ ನಡೆದಾಡಬಲ್ಲವು .

Comments

Popular posts from this blog

top 10 free computer automation software

Rainbow loader with html with CSS