Why the smell of cooking gas? / ಅಡುಗೆ ಅನಿಲ ವಾಸನೆ ಏಕೆ ?
Why cooking gas smells?
Natural gas, the most common form of underground gas, is used today for a variety of reasons. This natural gas is one of the few energy sources we have. This natural gas contains a substance, mainly methane. The methane molecule is formed when four parts of the hydrogen atoms are joined. The methane has not only a flammable characteristic but also a completely combustible nature. Its specialty is that there is no ash when it is burned. This is another feature of methane. There is no air pollution when it burns. The most distinctive feature of this gas is that it has no odor at all. But, why does a homemade gas cylinder smell like a leak? The question also arises. The reason. The gas used in cooking is an accidental leakage, but for the sake of homeownership, gas distribution companies mix a separate chemical that smells like rotten chicken. This is because the gas leak is known to cause a gas leak.
translated from kannada
ಅಡುಗೆ ಅನಿಲ ವಾಸನೆ ಏಕೆ?
ಭೂಗರ್ಭದೊಳಗೆ ಅತಿ ಮೇಲ್ಬಾಗದಲ್ಲಿ ದೊರೆಯುವ ಸಹಜವಾದ ಇಂಧನ ಅನಿಲ ( ನ್ಯಾಚುರಲ್ ಗ್ಯಾಸ್ ) ವನ್ನು ನಾವು ಇಂದು ಅನೇಕ ಕಾರಣಗಳಿಗೆ ಬಳಸುತ್ತೇವ ವಿದ್ಯುತ್ ಉತ್ಪಾದನೆ ಅಡುಗೆ ಮೋಟಾರು ವಾಹನಗಳನ್ನು ಓಡಿಸಲು , ವಿವಿಧ ಉಪಕರಣಗಳಿಗೆ ಇಂಧನ ಶಕ್ತಿಯಾಗಿ , ನಾನಾ ಬಗೆಯ ರಾಸಾಯನಿಕಗಳ ತಯಾರಿಕೆಯಲ್ಲಿ ಈ ಅನಿಲವನ್ನು ವಿಪುಲವಾಗಿ ಬಳಸುತ್ತಿದ್ದೇವೆ . ನಮ್ಮಲ್ಲಿರುವ ಅಮೂಲ್ಯವಾದ ಕೆಲವೇ ಇಂಧನ ಶಕ್ತಿಗಳಲ್ಲಿ ಈ ನೈಸರ್ಗಿಕ ಅನಿಲವೂ ಒಂದು . ಈ ನ್ಯಾಚುರಲೆ ಗ್ಯಾಸ್‌ನಲ್ಲಿ ಪ್ರಮುಖವಾಗಿ ಮಿಥೇನ್ ಎಂಬ ಒಂದು ಪದಾರ್ಥ ಇರುತ್ತದೆ . ನಾಲ್ಕು ಭಾಗ ಹೈಡೋಜನ್ ಪರಮಾಣುಗಳು ಸೇರಿದಾಗ ಮೀಥೇನ್ ಅಣುವು ರೂಪುಗೊಳ್ಳುತ್ತದೆ . ಈ ಮಿಥನ್‌ಗೆ ಭಗ್ಗೆಂದು ಹೊತ್ತಿಕೊಳ್ಳುವ ಲಕ್ಷಣ ಮಾತ್ರವಲ್ಲದೆ ಸಂಪೂರ್ಣವಾಗಿ ದಹಿಸುವ ಸ್ವಭಾವ ಕೂಡ ಇರುತ್ತದೆ . ಇದೇ ಇದರ ವಿಶೇಷ ಇದು ದಹಿಸಿದಾಗ ಯಾವುದೇ ರೀತಿಯ ಬೂದಿಯೂ ಇರುವುದಿಲ್ಲ . ಇದು ಈ ಮೀಥೇನ್‌ನ ಮತ್ತೊಂದು ವೈಶಿಷ್ಟ್ಯ . ಇದು ಸುಡುವಾಗ ವಾಯುಮಾಲಿನ್ಯವೂ ಇರುವುದಿಲ್ಲ . ಈ ಎಲ್ಲಾ ವೈಶಿಷ್ಟಗಳ ಹೊರತಾಗಿ ಈ ಅನಿಲಕ್ಕೆ ವಾಸನೆಯೇ ಇಲ್ಲದಿರುವುದು ಅತ್ಯಂತ ವಿಶಿಷ್ಟವಾದದ್ದು ಇಬಹುದು . ಆದರೆ , ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಒಂದು ರೀತಿಯ ವಾಸನೆ ಬರುವುದೇಕೆ ? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ . ಅದಕ್ಕೆ ಕಾರಣ ಇಷ್ಟೇ . ಮನಗಳಲ್ಲಿ ಅಡುಗೆಗೆ ಉಪಯೋಗಿಸುವ ಗ್ಯಾಸ್ ಒಂದು ವೇಳೆ ಅಕಸ್ಮಾತ್ ಸೋರಿಕೆ ( ಲೀಕೇಜ್ ) ಆದರೆ ಮನೆಯವರಿಗೆ ಗೊತ್ತಾಗಬೇಕೆಂಬ ಕಾರಣಕ್ಕಾಗಿ ಗ್ಯಾಸ್ ವಿತರಣಾ ಕಂಪನಿಗಳವರು ಕೊಳೆತ ಕೋಳಿಮೊಟ್ಟೆ ವಾಸನೆ ಬೀರುವಂತಹ ಒಂದು ಪ್ರತ್ಯೇಕವಾದ ರಾಸಾಯನಿಕ ವಸ್ತುವನ್ನು ಸ್ವಾಸಗೆ ಬೆರೆಸುತ್ತಾರೆ . ಇದನ್ನು ಮಾಡುವುದು ಗ್ಯಾಸ್ ಸೋರಿಕೆ ಗೊತ್ತಾಗಿ ಅಪಾಯ ತಪ್ಪಲಿ ಎಂಬ ಕಾರಣದಿಂದಷ್ಟೆ ಈ ಕಾರಣದಿಂದಷ್ಟೆ ಗ್ಯಾಸ್ ಕೆಂಜ್ ಆದಾಗ ಆ ರೀತಿಯ ವಾಸನೆ ಬರುತ್ತದೆ .
Comments