ಮೇ 22 ವಿಶ್ವ ಜೀವ ವೈವಿಧ್ಯ ದಿನ

 ಮೇ 22 ವಿಶ್ವ ಜೀವ ವೈವಿಧ್ಯ ದಿನ

 ಮನುಕುಲದ ಅಸ್ತಿತ್ವಕ್ಕೆ ಅಡಿಪಾಯದಂತಿರುವ ಜೀವ ವೈವಿಧ್ಯವನ್ನು | ಕಾಪಾಡಿ ಅದನ್ನು ಉಳಿಸಿ , ಬೆಳೆಸುವ ಸಂಕಲ್ಪದೊಂದಿಗೆ 1993 ರಿಂದ ಪ್ರತಿ ವರ್ಷ ಮೇ 22 ರಂದು ವಿಶ್ವ ಜೀವ ವೈವಿಧ್ಯ ದಿನವನ್ನು ( Conserving the Diversity of Life- International Day for Biological Diversity ) ಆಚರಿಸಲಾಗುತ್ತಿದೆ . ಜೀವ ವೈವಿಧ್ಯ ಎಂದರೆ ಭೂಮಿಯ ಮೇಲೂ , ನೀರಿನ ಒಳಗೂ , ಗಾಳಿಯಲ್ಲೂ ಇರುವ ಎಲ್ಲ ಬಗೆಯ ಸಸ್ಯ , ಪ್ರಾಣಿ , ಪಾಚಿ , ಶಿಲೀಂಧ್ರ , ಸೂಕ್ಷ್ಮ ಜೀವಿಗಳು ಇತ್ಯಾದಿ . ಜೀವ ವೈವಿಧ್ಯ ಮತ್ತು ಅವುಗಳ ಸಹಕಾರವಿಲ್ಲದಿದ್ದಲ್ಲಿ ಮನುಕುಲ ಜೀವಿಸುವುದು ಕಷ್ಟ ಅವನ್ನು ಉಳಿಸಿ , ಬೆಳೆಸುವ ಸಂಕಲ್ಪದೊಂದಿಗೆ ಪ್ರತಿವರ್ಷ ಜೀವ ವೈವಿಧ್ಯ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ . ಮಾನವನ ಅಸ್ತಿತ್ವಕ್ಕೆ ಜೀವ ವೈವಿಧ್ಯತೆಯು ತಳಪಾಯವಾಗಿದೆ . ಹವಾಮಾನ ಪ್ರಕ್ರಿಯೆಗಳನ್ನು ನಿಯಂತ್ರಿಸುವ , ನೀರನ್ನು ಶುದ್ದೀಕರಿಸುವ ಸಾಮರ್ಥ್ಯವನ್ನು ಜೈವಿಕ ವ್ಯವಸ್ಥೆ ಹೊಂದಿದೆ . ಪ್ರವಾಹದ ವಿರುದ್ಧ ತಡೆಗೋಡೆಯಂತೆ ನಿಂತು ಮಣ್ಣಿನ ಫಲವತ್ತತೆಯನ್ನು ರಕ್ಷಿಸಿ ಗಾಳಿಯನ್ನು ಶುದ್ದೀಕರಿಸುತ್ತದೆ . ಮರ , ಜವಳಿಯಂತಹ ನೈಸರ್ಗಿಕ ಸಂಪನ್ಮೂಲವನ್ನು ಒದಗಿಸುತ್ತದೆ . ಈ ವರ್ಷದ ( 2019 ) ಧೇಯ ವಾಕ್ಯ ( ಥೀಮ್ ) - Our Bio Diversity , Our Food , Our Health .

Comments

Popular posts from this blog

top 10 free computer automation software

Rainbow loader with html with CSS