🌸🌸............ಮಗು ಕಲಿಸಿದ ಪಾಠ....🌸🌸

 ಶುಭೋದಯ


🌸🌸............ಮಗು ಕಲಿಸಿದ ಪಾಠ....🌸🌸



     ಒಂದನೇ ತರಗತಿ ಓದುತ್ತಿದ್ದ ಮಗುವೊಂದು ಬೆಳಗ್ಗೆ ಎದ್ದು ವಾರ್ತಾಪತ್ರಿಕೆ ಓದುತ್ತಿದ್ದ ತಂದೆಯ ಬಳಿಗೆ ಹೋಗಿ... "ಅಪ್ಪ ಬಾ ಆಟ ಆಡೋಣ ಎಂದು ಕರೆಯುತ್ತದೆ. ಪುಟ್ಟ... ನಾನು ಪೇಪರ್  ಓದುತ್ತಾ ಇದೀನಿ ಮತ್ತೆ ಆಟ ಆಡೋಣ ಎಂಬ ತಂದೆಯ ಮಾತು ಮಗುವಿಗೆ ಹಿಡಿಸಲಿಲ್ಲ. ಮಗು ಇನ್ನಷ್ಟು ಹಠ ಮಾಡಿದಾಗ ಅಲ್ಲೇ ಇದ್ದ ಬೇರೊಂದು ಪೇಪರ್ ನಲ್ಲಿ    ವಿಶ್ವದ ನಕ್ಷೆ ಇರುವುದು ತಂದೆಯ ಕಣ್ಣಿಗೆ ಬೀಳುತ್ತದೆ. ಆ ನಕ್ಷೆಯನ್ನು ಮಗುವಿಗೆ ತೋರಿಸಿ ಪುಟ್ಟ ... ಇಲ್ಲಿನೋಡು... ವಿಶ್ವದ ನಕ್ಷೆ ಇದೆ, ನಾನು ಈ ನಕ್ಷೆಯನ್ನು ಕೆಲವು ತುಂಡುಗಳಾಗಿ ಕತ್ತರಿಸಿ ನಿನಗೆ ಕೊಡುತ್ತೇನೆ. ನೀನು ನಕ್ಷೆಯನ್ನು ಸರಿಯಾಗಿ ಜೋಡಿಸಿ ನನಗೆ ತೋರಿಸಿದ ನಂತರ ನಾನು ನಿನ್ನೊಂದಿಗೆ ಆಟವಾಡುತ್ತೇನೆ ಎಂದು ತಂದೆ ಹೇಳುತ್ತಾರೆ. 

        ಕೇವಲ ಐದೇ ನಿಮಿಷದಲ್ಲಿ ಮಗು ವಿಶ್ವದ ನಕ್ಷೆಯನ್ನು ಸರಿಯಾಗಿ ಜೋಡಿಸಿ ತಂದೆಯನ್ನು ಕರೆಯುತ್ತದೆ...! ತಂದೆಗೆ ಆಶ್ಚರ್ಯ...!!!. 'ಒಂದು ವೇಳೆ ಈ ಕೆಲಸವನ್ನು ನನಗೆ ಕೊಟ್ಟಿದ್ದರು ಸಹ ಖಂಡಿತ ನನ್ನಿಂದ ಮಾಡಲು ಸಾಧ್ಯವಾಗುತ್ತಿರಲಿಲ್ಲ ' ಎಂದು ತಂದೆ ಅಂದುಕೊಳ್ಳುತ್ತಿರುವಾಗ, ತಂದೆಯ ಆಶ್ಚರ್ಯದ ಮುಖವನ್ನು ನೋಡಿದ ಮಗು ಹೀಗೆ ಹೇಳುತ್ತದೆ...ಅಪ್ಪ ನಿನಗೆ ಆಶ್ಚರ್ಯ ಆಯ್ತಲ್ವಾ...ನನಗೆ ವಿಶ್ವದ ನಕ್ಷೆಯಲ್ಲಿ ಅಮೇರಿಕಾ, ಬ್ರೆಜಿಲ್, ಇಸ್ರೇಲ್, ಸೌದಿ, ಭೂತಾನ್, ಜಪಾನ್ ಎಲ್ಲಿ ಬರುತ್ತದೆ ಎಂದು ನಿಜವಾಗಿಯೂ ಗೊತ್ತಿಲ್ಲ; ಆದರೆ ನೀನು ವಿಶ್ವದ ನಕ್ಷೆಯನ್ನು ಚಿಕ್ಕ ತುಂಡಾಗಿ ಕತ್ತರಿಸುವಾಗ ಅದರ ಹಿಂಭಾಗದಲ್ಲಿ ಒಂದು ಮನುಷ್ಯನ ಚಿತ್ರ ಇದ್ದಿದ್ದನ್ನು ನಾನು ನೋಡಿದ್ದೆ.  ಅಪ್ಪಾ... ನನಗೆ ಕಣ್ಣು, ಕಿವಿ, ಮೂಗು, ಬಾಯಿ, ಹೊಟ್ಟೆ, ಕಾಲು ಎಲ್ಲಿದೆ ಎಂಬುದು ಚೆನ್ನಾಗಿ ಗೊತ್ತು...ನಾನು ಮನುಷ್ಯನನ್ನು ಸರಿ ಮಾಡಿದೆ ಆಗ ಜಗತ್ತು ಸರಿಯಾಯಿತು...!

      ಭೂಮಿ ಮೇಲಿನ ಪ್ರತಿಯೊಬ್ಬ ವ್ಯಕ್ತಿಯೂ ಸಹ 'ಮೊದಲು ನಾನು ಸರಿಯಾಗಬೇಕು' ಎಂದು ಅಂದುಕೊಂಡರೆ ಜಗತ್ತು  ತಾನಾಗಿಯೇ ಸರಿಯಾಗುತ್ತದೆ ಎಂಬ ಅದ್ಭುತ ಸಂದೇಶ ಮಗುವಿನ ಮುಗ್ಧ ಮಾತುಗಳಲ್ಲಿತ್ತು.



(ಯಾವತ್ತೋ ಕೇಳಿದ ಈ ಕಥೆ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿತು)

Comments

Popular posts from this blog

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

How to be happy in these days?