Posts

Showing posts from November, 2020

ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣದಲ್ಲೊಂದು ರೌಂಡಪ್

Image
 *ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣದಲ್ಲೊಂದು ರೌಂಡಪ್‌* 🔹🔹🔹🔹🔹🔹🔹🔹🔹🔹🔹 November 4, 2020 ಜಗತ್ತಿನ ಯಾವುದೇ ಭಾಗದಲ್ಲಿ ಜಾತಿ-ಧರ್ಮ- ಭಾಷೆ ಬದಲಾದಂತೆ ಜನರ ವರ್ತನೆಗಳು, ಆಚಾರ ವಿಚಾರಗಳು ಬದಲಾಗಬಹುದು. ಆದರೆ ವಿಶ್ವಾದ್ಯಂತ ಮನುಷ್ಯರ ಮೂಲಭೂತ ವರ್ತನೆಯಲ್ಲಿ ಬದಲಾವಣೆ ಇಲ್ಲದ ಒಂದೇ ಒಂದು ಕ್ಷೇತ್ರವೆಂದರೆ ಅದು ರಾಜಕೀಯ. ಭಾರತದ ರಾಜಕಾರಣಿಗಳು ಮತದಾರರ ಓಲೈಕೆ ಮಾಡುವುದು, ಮುಜುಗರದ ಪ್ರಸಂಗಗಳು ಬಂದಾಗ ಯಾವುದೋ ನೆಪದಲ್ಲಿ ಜನರಿಗೆ ಸಿಗದೆ ಭೂಗತರಾಗುವುದು, ಅಧಿಕಾರದ ದುರುಪಯೋಗದಿಂದ ಆಸ್ತಿ ಗಳಿಸುವುದು ಇದೆಲ್ಲವೂ ಭಾರತಕ್ಕೆ ಸೀಮಿತವಾಗಿಲ್ಲ, ಎಲ್ಲಾ ದೇಶಗಳಲ್ಲೂ ಇದೆ. ನಾವೆಲ್ಲ ಸ್ವರ್ಗ ಸದೃಶ ಎಂದು ಭಾವಿಸುವ ಮಾತ್ರವಲ್ಲ ಅಮೆರಿಕದಲ್ಲೂ ಇದೆ. ಒಂದೇ ವ್ಯತ್ಯಾಸವೆಂದರೆ ನಮ್ಮಲ್ಲಿ ಹಣ ಮಾಡಲು ಅಡ್ಡದಾರಿ ಹಿಡಿದರೆ, ಅವರು ಉದ್ದಿಮೆ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ‌. ನೇರವಾಗಿ ಲಂಚ ರುಷುವತ್ತು ಇಲ್ಲ, ಅಷ್ಟರಮಟ್ಟಿಗೆ ಪ್ರಾಮಾಣಿಕರು. ಇದು ಪರೋಕ್ಷವಾಗಿ ಭ್ರಷ್ಟಾಚಾರದ ವ್ಯಾಪ್ತಿಗೆ ಬರುತ್ತದೆ. ಏಕೆಂದರೆ, ವಿಶ್ವದ ಪ್ರಭಾವಿ ರಾಷ್ಟ್ರದ ನಾಯಕನ ಒಡೆತನದ ಉದ್ದಿಮೆಗಳಿಗೆ ಯಾವುದೇ ರಾಷ್ಟ್ರವಾದರೂ ಕೆಂಪು ಹಾಸಿನ ಸ್ವಾಗತದ ಜೊತೆಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ, ಓಲೈಸುವ ಪ್ರಯತ್ನ ಮಾಡುವುದು ಸಹಜವೇ ತಾನೇ? ಹಾಗೆ ಸಿಗುವ ಲಾಭ ಸಂಪೂರ್ಣವಾಗಿ ಪ್ರಾಮಾಣಿಕ ಸಂಪಾದನೆ ಎನಿಸುವುದೇ? ಇನ್ನು ಅಮೇರಿಕದ ಚುನಾವಣಾ ಪ್ರಕ್ರಿಯೆಯ