*ಹರಪನಹಳ್ಳಿಯಲ್ಲಿ 13 ವರ್ಷದ ಬಾಲಕನಿಗೆ ಕರೋನಾ ಸೊಂಕು ದೃಢ.*

 *ಬಾಣಗೇರಿ ಸೀಲ್ ಡೌನ್ ಕಂಟೇನ್ ಮೆಂಟ್ ಜೋನ್ ಎಂದು ಘೋಷಣೆ.*

ಹರಪನಹಳ್ಳಿ : ಬಾಲಕನೊಬ್ಬನಿಗೆ ಕರೋನಾ ವೈರಸ್
ಇರುವುದು ದೃಢ ಪಟ್ಟ ಹಿನ್ನಲೆಯಲ್ಲಿ ಪಟ್ಟಣದ ಬಾಣಗೇರಿಯನ್ನು ಸೀಲ್ ಡೌನ್ ಮಾಡಿ ಕಂಟೇನ್ ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.

13 ವರ್ಷದ ಸೊಂಕಿತ ಬಾಲಕ ಹಾಗೂ ಆತನ
ತಂದೆ ಗುಜರಾತ್ ನಿಂದ ಆಗಮಿಸಿದಾಗ ಅಧಿಕಾರಿಗಳು ತೋರಣಗಲ್ ಬಳಿ ಕ್ವಾರಂಟೈನ್ ನಲ್ಲಿ ಇಟ್ಟಿದ್ದರು. ತಂದೆಗೆ ದ್ರವ ಪರೀಕ್ಷೆ ನೆಗಟಿವ್ ಬಂದ ಹಿನ್ನಲೆಯಲ್ಲಿ ತಂದೆ ಜೊತೆ ಮಗನನ್ನು ಬಿಡುಗಡೆ ಮಾಡಲಾಗಿತ್ತು ಎಂದು ಹೇಳಲಾಗಿದೆ.ಬಾಲಕ ಮೆ.30 ರಂದು ಬೆಳಿಗ್ಗೆ ಹರಪನಹಳ್ಳಿ ಪಟ್ಟಣದ ಬಾಣಗೇರಿ ನಿವಾಸಕ್ಕೆ ಆಗಮಿಸಿದ್ದು, ಇಂದು ಆತನ ದ್ರವ ಪರೀಕ್ಷೆ ವರದಿ ಬಂದಿದ್ದು, ಕರೋನಾ ಇರುವುದು ದೃಢ ಪಟ್ಟಿದೆ.

ಭಾನುವಾರ ಸಂಜೆ ಸೊಂಕಿತ ಬಾಲಕನನ್ನು
ಬಳ್ಳಾರಿ ಕೋವಿಡ್ ಆಸ್ಪತ್ರೆಗೆ ಕಳಿಸಲಾಗಿದೆ, ಇತ್ತ
ಬಾಣಗೇರಿಯಲ್ಲಿರುವ ಸೊಂಕಿತನ ಮನೆಯ 100
ಮೀಟರ ಸುತ್ತ ಕಂಪ್ಲೀಟ್ ಸೀಲ್ ಡೌನ್
ಮಾಡಲಾಗುವುದು, ನಂತರ 900 ಮೀಟರ್ ಬಪರ್
ಜೋನ್ ಎಂದು ಘೋಷಿಸಲಾಗುವುದು ಎಂದು
ತಹಶೀಲ್ದಾರ ಡಾ.ನಾಗವೇಣಿ ತಿಳಿಸಿದರು.

ಸೊಂಕಿತನ ಮನೆ ಬಳಿ ರಸಾಯನಿಕ ಸಿಂಪಡನೆ ಮಾಡಲಾಗಿದ್ದು, ಆತನ ಪ್ರಾಥಮಿಕ ಹಾಗೂ
ದ್ವಿತೀಯ ಸಂಪರ್ಕದವರ ಪತ್ತೆ ಕಾರ್ಯನಡೆದಿದ್ದು, ಸಂಬಂಧ ಪಟ್ಟ ಎಲ್ಲರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಹೇಳಿದ್ದಾರೆ.

ತಾಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್, ಸಿಪಿಐ
ಕೆ.ಕುಮಾರ್, ಪಿಎಸ್ಐ ಸಿ.ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಬಿ.ಆರ್.ನಾಗರಾಜ್ ನಾಯ್ಕ್ ಸೇರಿದಂತೆ ಕಂದಾಯ ಹಾಗೂ ಆರೋಗ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


🔎 Source:- WhatsApp

Comments

Popular posts from this blog

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

How to be happy in these days?